ಮೋತಿಹಾರಿ: ಬಿಹಾರದ ಮೋತಿಹಾರಿಯಲ್ಲಿರುವ ಸರಕಾರೇತರ ಸಂಸ್ಥೆಯೊಂದರ ಅಡುಗೆ ಮನೆಯಲ್ಲಿ ಬಾಯ್ಲರ್ ಸಿಡಿದ ಪರಿಣಾಮವಾಗಿ ಮೂರು ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿರುವ ಘಟನೆಯು ಶನಿವಾರ ನಡೆದಿದೆ.
ಮೋತಿಹಾರಿಯ ಸುಗೌಲಿ ಎಂಬಲ್ಲಿ ಈ ಘಟನೆಯು ಶನಿವಾರ ಬೆಳಗ್ಗೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಸರಕಾರೇತರ ಸಂಸ್ಥೆ `ನವ ಪ್ರಯಾಸ್’ ಸಂಸ್ಥೆಯವರು ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಬಾಯ್ಲರ್ ಸ್ಫೋಟದಿಂದಾಗಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ನಿತೀಶ್ ಕುಮಾರ್ ಸರ್ಕಾರವು 4 ಲಕ್ಷ ರೂಪಾಯಿ ಘೋಷಣೆ ಮಾಡಿದೆ. ಗಾಯಾಳುಗಳ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸರ್ಕಾರ ತಿಳಿಸಿದೆ.