ನವದೆಹಲಿ: ಫೇಸ್ ಬುಕ್ ಸಂಸ್ಥೆಯು ಸುಮಾರು 320 ಕೋಟಿ ನಕಲಿ ಖಾತೆ ಮತ್ತು 1 ಕೋಟಿ 4 ಲಕ್ಷ ದ್ವೇಷಪೂರಿತ ಭಾಷಣಗಳಿಂದ ತುಂಬಿದ ಪೋಸ್ಟ್ ಗಳನ್ನು ಕಿತ್ತು ಹಾಕಿದೆ ಎಂದು ಹೇಳಿದೆ.
ಕಳೆದ ಆರು ತಿಂಗಳಲ್ಲಿ ಫೇಸ್ ಬುಕ್ ನಕಲಿ ಮತ್ತು ನಿಂದನೀಯ ಖಾತೆಗಳನ್ನು ಕಂಡುಹಿಡಿಯುವಲ್ಲಿ ಹೆಚ್ಚಿನ ಸುಧಾರಣೆ ಕಂಡುಕೊಂಡಿದೆ ಎಂದು ಹೇಳಿದೆ.
ಭಯೋತ್ಪಾದನೆಗೆ ಸಂಬಂಧಿಸಿದ ಖಾತೆಗಳನ್ನು ಕಿತ್ತು ಹಾಕುವಲ್ಲಿ ಕಾರ್ಯನಿರತರಾಗಿದ್ದೇವೆ ಎಂದು ಫೇಸ್ ಬುಕ್ ಸಂಸ್ಥೆಯು ತಿಳಿಸಿದೆ.