ನವದೆಹಲಿ: ಬಾನುವಾರ ನಡೆಯಲಿರುವ ಎನ್ ಡಿಎ ಸಭೆಯಲ್ಲಿ ಶಿವಸೇನೆಯು ಭಾಗಿಯಾಗುವುದಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಆದರೆ ಶಿವಸೇನೆಯ ಸಂಸದರು ಚಳಿಗಾಲ ಅಧಿವೇಶನಕ್ಕೆ ಮೊದಲು ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾಗುವರು ಎಂದು ರಾವುತ್ ತಿಳಿಸಿದರು.
ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ಸಂಸದ ಸಂಜಯ್ ರಾವುತ್ ಅವರು ಈ ಘೋಷಣೆ ಮಾಡಿದರು. ಚಳಿಗಾಲ ಅಧಿವೇಶಕ್ಕೆ ಮೊದಲು ಭಾನುವಾರ ಎನ್ ಡಿಎ ಸಭೆ ಕರೆಯಲಾಗಿದೆ.