ಶಬರಿಮಲೆ: ಶನಿವಾರ ಸಂಜೆ ಐದು ಗಂಟೆ ವೇಳೆ ಶಬರಿಮಲೆ ಅಯ್ಯಪ್ಪ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಅರ್ಚಕರು ತೆರೆದರು.
ಶನಿವಾರದಿಂದ ಶಬರಿಮಲೆ ತೀರ್ಥಯಾತ್ರೆ ಋತು ಆರಂಭಾಗಿದ್ದು, ಇದು ಮಕರ ಸಂಕ್ರಾಂತಿ ತನಕ ಮುಂದುವರಿಯಲಿದೆ.
ಆದರೆ ಈ ಸಲ ಮಹಿಳೆಯರಿಗೆ ಅವಕಾಶವನ್ನು ನಿರಕಾರಿಸಲಾಗಿದೆ. ಪಂಪಾದಿಂದಲೇ ಪೊಲೀಸರು ಮಹಿಳೆಯರನ್ನು ವಾಪಸ್ ಕಳುಹಿಸಿಕೊಡುತ್ತಿದ್ದಾರೆ. ಆಂಧ್ರಪ್ರದೇಶದಿಂದ ಬಂದ ತಂಡದಲ್ಲಿದ್ದ ಮೂವರು ಮಹಿಳೆಯರಿಗೆ ವಯಸ್ಸಿನ ಪ್ರಮಾಣ ಪತ್ರ ತೋರಿಸಲು ಸೂಚಿಸಲಾಯಿತು. ಆದರೆ ಅವರು 10-50 ವಯಸ್ಸಿನವರಾಗಿದ್ದ ಕಾರಣ ಅವರನ್ನು ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.