ನವದೆಹಲಿ: ಇಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ. ರಾಜ್ಯಸಭಾ ಅಧ್ಯಕ್ಷ ಪಿ.ವೆಂಕಯ್ಯ ನಾಯ್ಡು ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಅಧಿವೇಶನ ಆರಂಭಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಅಗಲಿದ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಮ್ ಜೇಠ್ಮಲಾನಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಮಾಜಿ ಸಿಪಿಐ ನೇತಾರ ಗುರುದಾಸ್ ಗುಪ್ತಾ ಅವರಿಗೆ ಲೋಕಸಭೆ ಮತ್ತು ರಾಜ್ಯಸಭೆ ಸಂತಾಪ ಸೂಚಿಸಿದೆ.