ನವದೆಹಲಿ: ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆಗೆ ಸೇರಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬಹುದು ಎಂದು ಭಾವಿಸಿಕೊಂಡಿದ್ದ ಶಿವಸೇನೆಗೆ ಈಗ ದೊಡ್ಡ ಆಘಾತವಾಗಿದ್ದು, ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಯೂ ಟರ್ನ್ ಹೊಡೆದಿದ್ದಾರೆ.
ಸೋಮವಾರ ಸಂಸತ್ತಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪವಾರ್, ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆಯಾಗಿ ಸ್ಪರ್ಧಿಸಿದೆ. ಅದೇ ರೀತಿ ಬಿಜೆಪಿ ಹಾಗೂ ಶಿವಸೇನೆ ಕೂಡ ಜತೆಗೆ ಸ್ಪರ್ಧಿಸಿದೆ. ಇದರಿಂದ ಅವರು ತಮ್ಮ ಹಾದಿ ನೋಡಿಕೊಳ್ಳಲಿ ಎಂದರು.
ಮಹಾರಾಷ್ಟ್ರದಲ್ಲಿ ಶಿವಸೇನೆಯ ಮುಖ್ಯಮಂತ್ರಿ ಮಾಡಬೇಕೆಂದು ಕನಸು ಕಂಡಿರುವ ಉದ್ಧವ್ ಠಾಕ್ರೆಗೆ ಇದರಿಂದ ಭಾರೀ ಹಿನ್ನಡೆಯಾಗಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗುವ ಮೊದಲು ಅವರು ಈ ರೀತಿ ಹೇಳಿಕೆ ನೀಡಿದರು.