ನವದೆಹಲಿ: ಅಜಿತ್ ಪವಾರ್ ರಾಜಭವನಕ್ಕೆ ಸುಳ್ಳು ದಾಖಲೆಗಳನ್ನು ನೀಡಿದ್ದು, ಅವುಗಳನ್ನು ರಾಜ್ಯಪಾಲರು ಸ್ವೀಕರಿಸಿದ್ದಾರೆ.
ನಮಗೆ ರಾಜ್ಯಪಾಲರು ಅವಕಾಶ ನೀಡಿದರೆ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 23 ದೇಶ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಕರಾಳ ದಿನವಾಗಿದೆ.
ಈ ರೀತಿಯ ರಾಜಕೀಯ ಬೆಳವಣಿಗೆ ದೇಶಕ್ಕೆ ಮೊದಲು. ರಾಜಭವನ ಮತ್ತು ರಾಷ್ಟ್ರಪತಿ ಭವನಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ದೇಶದಲ್ಲಿ ಮೊದಲು ಎಂದು ಅಸಮಾಧಾನ ವ್ಯಕ್ತಪಡಿಸಿದರು.