ಮುಂಬಯಿ: ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಹಾರಾಷ್ಟ್ರ ವಿಧಾನಸಭೆಗೆ ಹಂಗಾಮಿ ಸ್ಪೀಕರ್ ಆಗಿ ಕಾಳಿದಾಸ್ ಕೊಲಂಬ್ಕರ್ ಅವರನ್ನು ನೇಮಕ ಮಾಡಲಾಗಿದೆ.
ನಾಳೆ ಬೆಳಗ್ಗೆ ಎಂಟು ಗಂಟೆ ವಿಧಾನಸಭೆ ಅಧಿವೇಶನವು ನಡೆಯುವುದಾಗಿ ಹಂಗಾಮಿ ಸ್ಪೀಕರ್ ಅವರು ಘೋಷಿಸಿದ್ದಾರೆ. ಇದರ ಬಳಿಕ ಶಾಸಕರ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮವು ನಡೆಯಲಿದೆ.
ನಾಳೆ ಸಂಜೆ ಐದು ಗಂಟೆ ಒಳಗಡೆ ಸರ್ಕಾರ ಬಹುಮತ ಸಾಬೀತು ಮಾಡಬೇಕು ಎಂದು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ. ಇದರನ್ವಯ ನಾಳೆ ಶಿವಸೇನೆ-ಕಾಂಗ್ರೆಸ್- ಎನ್ ಸಿಪಿ ಮೈತ್ರಿ ಸರ್ಕಾರವು ಬಹುಮತ ಸಾಬೀತು ಮಾಡಬೇಕಾಗಿದೆ.