ಮುಂಬಯಿ: ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ಜತೆಗೆ ಕೈಜೋಡಿಸಿರುವುದನ್ನು ವಿರೋಧಿಸಿರುವ ಶಿವಸೇನೆಯ ಯುವಘಟಕದ ಮುಖಂಡ ರಮೇಶ್ ಸೋಲಂಕಿ ಅವರು ಟ್ವೀಟ್ ಮೂಲಕ ರಾಜೀನಾಮೆ ನೀಡಿದ್ದಾರೆ.
ಶಿವಸೇನೆಯ ಮುಖ್ಯಮಂತ್ರಿ ಮಹಾರಾಷ್ಟ್ರದಲ್ಲಿ ಹೊಂದುತ್ತಿರುವುದಕ್ಕೆ ಅಭಿನಂದನೆಗಳು. ಆದರೆ ನನ್ನ ಮನಸ್ಸಾಕ್ಷಿ ಮತ್ತು ಸಿದ್ಧಾಂತಗಳು ಕಾಂಗ್ರೆಸ್ ಜತೆಗೆ ಕೆಲಸ ಮಾಡಲು ಒಪ್ಪುತ್ತಿಲ್ಲ. ಅರೆ ಮನಸ್ಸಿನಿಂದ ಕೆಲಸ ಮಾಡಲು ಮನಸ್ಸು ಒಪ್ಪಲ್ಲ. ನನ್ನ ಹುದ್ದೆ, ನನ್ನ ಪಕ್ಷದ ಶಿವ ಸೈನಿಕರು ಮತ್ತು ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ಸೋಲಂಕಿ ಟ್ವೀಟ್ ಮಾಡಿರುವರು.
ಕಳೆದ 21 ವರ್ಷಗಳಿಂದ ವಿಶೇಷ ಬಾಂಧವ್ಯ ಹೊಂದಿರುವ ಎಲ್ಲಾ ಶಿವ ಸೈನಿಕರು ನನ್ನ ಸೋದರರು ಮತ್ತು ಸೋದರಿಯಾಗಿಯೇ ಇರುತ್ತಾರೆ. ನಾನು ಯಾವತ್ತಿಗೂ ಬಾಳಾ ಸಾಹೇಬರ ಶಿವಸೈನಿಕನಾಗಿಯೇ ಉಳಿಯುತ್ತೇನೆ ಎಂದು ಅವರು ಹೇಳಿರುವರು.