News Kannada
Monday, October 03 2022

ದೇಶ-ವಿದೇಶ

ಐಎನ್ ಎಕ್ಸ್ ಮೀಡಿಯಾ ಹಗರಣ: ಚಿದಂಬರಂ ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ - 1 min read

Photo Credit :

ಐಎನ್ ಎಕ್ಸ್ ಮೀಡಿಯಾ ಹಗರಣ: ಚಿದಂಬರಂ ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಗರಣದ ಅಕ್ರಮ ಹಣ ವರ್ಗಾವಣೆಯಲ್ಲಿ ಜಾಮೀನು ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬಂರ ಅರ್ಜಿಯ ಮೇಲಿನ ತೀರ್ಪನ್ನು ಕಾಯ್ದಿರಿಸಿದೆ.

ಜಾರಿ ನಿರ್ದೇಶನಾಲಯ(ಇ.ಡಿ.) ನೀಡುವಂತಹ ಮೂರು ಸೀಲ್ ಮಾಡಲ್ಪಟ್ಟ ಲಕೋಟೆಗಳನ್ನು ಭದ್ರವಾಗಿ ಕೋರ್ಟ್ ನ ಅಧೀನದಲ್ಲಿ ಇಡಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ರಿಜಿಸ್ಟಾರ್ ಗೆ ಆದೇಶಿಸಿದೆ.

ಚಿದಂಬಂರಂ ಅವರಿಗೆ ಜಾಮೀನು ನೀಡುವುದನ್ನು ಸಿಬಿಐ ವಿರೋಧಿಸಿದೆ ಮತ್ತು ಕಸ್ಟಡಿಯಲ್ಲಿ ಇದ್ದುಕೊಂಡೇ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಆರೋಪ ಮಾಡಿದೆ.

ಇ.ಡಿ.ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇಂತಹ ಆರ್ಥಿಕ ಅಪರಾಧಗಳು ಕೇವಲ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ವ್ಯವಸ್ಥೆ ಮೇಲೆ ಜನರಿಗೆ ಇರುವಂತಹ ನಂಬಿಕೆಗೂ ಆಘಾತ ನೀಡುತ್ತದೆ ಎಂದರು.

ಜಸ್ಟಿಸ್ ಆರ್ ಬಾಬುಮತಿ, ಜಸ್ಟಿಸ್ ಎ ಎಸ್ ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ಪೀಠವು ವಾದ ಆಲಿಸಿತು.

ಚಿದಂಬರಂ ಪರವಾಗಿ ವಾದಿಸುತ್ತಿರುವ ಕಪಿಲ್ ಸಿಬಲ್ ಅವರು, ಕೇವಲ ಕಾರ್ತಿ ಅವರ ತಂದೆ ಎನ್ನುವ ಕಾರಣಕ್ಕಾಗಿ 100 ದಿನಗಳ ಕಾಲ ಬಂಧನದಲ್ಲಿ ಇಟ್ಟಿರುವುದು ಸರಿಯಾದ ನಿರ್ಧಾರವಲ್ಲ ಎಂದರು. ಈ ಪ್ರಕರಣದಲ್ಲಿ ಚಿದಂಬರಂ ವಿರುದ್ಧ ಇ.ಡಿ. ಬಳಿ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ವಾದಿಸಿದರು.

See also  ನೋಯ್ಡಾ: ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಹೋದರಿಬ್ಬರ ಮೃತದೇಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು