ರಾಂಚಿ: 25ವರ್ಷದ ಕಾನೂನು ವಿದ್ಯಾರ್ಥಿಯನ್ನು ಅಪಹರಿಸಿ 12ಮಂದಿ ಯುವಕರು ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್ ನ ಸಂಗ್ರಾಪುರ್ ಹಳ್ಳಿಯಲ್ಲಿ ನಡೆದಿದೆ.
ರಾಂಚಿ ಪೊಲೀಸರು ಶುಕ್ರವಾರ 12ಮಂದಿಯನ್ನು ಬಂದಿದ್ದಾರೆ. ಬಂದೂಕು ಮತ್ತು ಮಾರಕಾಸ್ತ್ರಗಳನ್ನು ಹಿಡಿದಿದ್ದ ಗುಂಪು ವಿದ್ಯಾರ್ಥಿನಿಯ ಗೆಳೆಯನ ಮೇಲೆ ಹಲ್ಲೆ ನಡೆದಿದೆ. ನಂತರ ಆಕೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ತನಿಖೆಯಲ್ಲಿ ಹೇಳಿದ್ದಾರೆ.
ವಿದ್ಯಾರ್ಥಿನಿ ದೂರಿನ ಆಧಾರದ ಮೇಲೆ ಅತ್ಯಾಚಾರ, ಹಲ್ಲೆ ಮತ್ತು ದರೋಡೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.