ನವದೆಹಲಿ: ಮುಂದಿನ ಐದು ವರ್ಷದೊಳಗೆ ದೇಶದೊಳಗಿರುವ ನುಸುಳುಕೋರರನ್ನು ಹೊರಗೆ ಹಾಕುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.
ದೇಶದಾದ್ಯಂತ ಪೌರತ್ವ ನೋಂದಣಿ ಅನುಷ್ಠಾನ ಮಾಡಲಾಗುವುದು. 2024ರ ಸಂಸತ್ ಚುನಾವಣೆಗೆ ಮೊದಲು ದೇಶದಲ್ಲಿರುವ ಅಕ್ರಮ ವಲಸಿಗರನ್ನು ಹೊರ ಹಾಕಲಾಗುತ್ತದೆ ಎಂದು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾದ ಅಮಿತ್ ಶಾ ಹೇಳಿದರು.
ಎನ್ ಆರ್ ಸಿಗೆ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ ನ ರಾಹುಲ್ ಗಾಂಧಿ, ಅಕ್ರಮ ವಲಸಿಗರು ಎಲ್ಲಿ ಹೋಗಬೇಕು ಎಂದು ಕೇಳುತ್ತಾರೆ. ಅಕ್ರಮ ವಲಸಿಗರು ರಾಹುಲ್ ಸಂಬಂಧಿಕರೇ ಎಂದು ಶಾ ಪ್ರಶ್ನಿಸಿದರು.