ನವದೆಹಲಿ: ಜಮ್ಮುಕಾಶ್ಮೀರದಲ್ಲಿ 370ನೇ ವಿಧಿ ತೆಗೆದುಹಾಕಿದ ಬಳಿಕ ಉಗ್ರ ಚಟುವಟಿಕೆಗಳು ಕಡಿಮೆ ಆಗಿದೆ ಎಂದು ಗೃಹ ಸಚಿವಾಲಯ ಮಂಗಳವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
ಆದರೆ ಪಾಕ್ ಗಡಿ ಮೂಲಕ ಭಾರತದೊಳಗೆ ನುಸುಳುವ ಪ್ರಕರಣಗಳು ಹೆಚ್ಚಾಗಿದೆ ಎಂದು ಗೃಹ ಸಚಿವಾಲಯವು ತಿಳಿಸಿದೆ.
ಆಗಸ್ಟ್ 5ರಂದು 370ನೇ ವಿಧಿ ತೆಗೆದು ಹಾಕಿದ ಬಳಿಕ ಉಗ್ರ ಚಟುವಟಿಕೆಗಳು ಕಡಿಮೆ ಆಗಿದೆ. ಆಗಸ್ಟ್ 5, 2109ರಿಂದ ನವಂಬರ್ 27, 2019ರ ತನಕ 88 ಇಂತಹ ಘಟನೆಗಳು ನಡೆದಿದೆ. ಅದೇ ಎಪ್ರಿಲ್ 12, 2109ರಿಂದ ಆಗಸ್ಟ್ 4, 2019ರ ತನಕ ಇದರ ಸಂಖ್ಯೆಯು 106 ಆಗಿತ್ತು ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾಹಿತಿ ನೀಡಿದರು.