ಶ್ರೀನಗರ: ಹಿಮಪಾತದಿಂದಾಗಿ ಮೂರು ಮಂದಿ ಯೋಧರು ನಾಪತ್ತೆಯಾಗಿರುವ ಘಟನೆಯು ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ದರ್ ಪ್ರದೇಶದಲ್ಲಿ ನಡೆದಿದೆ ಎಂದು ಭಾರತೀಯ ಸೇನೆಯ ಮೂಲಗಳು ಹೇಳಿವೆ.
ಮಂಗಳವಾರ ಮಧ್ಯಾಹ್ನ ವೇಳೆ ಹಿಮಪಾತ ನಡೆದಿದೆ. ಕಾಣೆಯಾದ ಯೋಧರ ಹುಡುಕಾಟ ನಡೆಯುತ್ತಿದೆ. ಆದರೆ ಹವಾಮಾನ ವೈಪರಿತ್ಯದಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸಿಯಾಚಿನ್ ನಲ್ಲಿ ಕಳೆದ ತಿಂಗಳು ಹಿಮಪಾತವಾಗಿ ನಾಲ್ಕು ಮಂದಿ ಯೋಧರು ಸಾವನ್ನಪ್ಪಿದ್ದರು.