ನವದೆಹಲಿ: ನಾಸಾ ಚಂದ್ರಯಾನ-2ರ ಲ್ಯಾಂಡರ್ ವಿಕ್ರಂನ ಅವಶೇಷ ಪತ್ತೆ ಮಾಡಿದೆ ಎಂದು ಸುದ್ದಿಯು ಹಬ್ಬುತ್ತಿದ್ದು, ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಚಂದ್ರಯಾನ-2ರ ಆರ್ಬಿಟರ್ ಅವಶೇಷವನ್ನು ಪತ್ತೆ ಮಾಡಿರುವುದು ಎಂದು ಹೇಳಿದ್ದಾರೆ.
ವಿಕ್ರಂ ಲ್ಯಾಂಡರ್ ಅವಶೇಷವನ್ನು ನಮ್ಮದೇ ಆರ್ಬಿಟರ್ ಪತ್ತೆ ಮಾಡಿದೆ ಮತ್ತು ಇದನ್ನು ನಾವು ಈ ಹಿಂದೆಯೇ ವೆಬ್ ಸೈಟ್ ನಲ್ಲಿ ಘೋಷಿಸಿದ್ದೇವೆ. ಇದರ ಬಗ್ಗೆ ನೀವು ಹೋಗಿ ಪರೀಕ್ಷಿಸಬಹುದು ಎಂದು ಶಿವನ್ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವರು.
ಸಪ್ಟೆಂಭರ್ 10,2019ರಂದು ವೆಬ್ ಸೈಟ್ ನಲ್ಲಿ ವಿಕ್ರಂ ಲ್ಯಾಂಡರ್ ನ ಅವಶೇಷಗಳು ಪತ್ತೆ ಆಗಿರುವುದನ್ನು ವೆಬ್ ಸೈಟ್ ನಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.