News Kannada
Sunday, November 27 2022

ದೇಶ-ವಿದೇಶ

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಪುತ್ರನ ಶಾಸಕತ್ವ ರದ್ದು - 1 min read

Photo Credit :

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಪುತ್ರನ ಶಾಸಕತ್ವ ರದ್ದು

ಲಕ್ನೋ: ಮಹತ್ವದ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಉತ್ತರ ಪ್ರದೇಶದ ವಿಧಾನಸಭೆಗೆ ಆಯ್ಕೆ ಆಗಿರುವುದನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ.

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಸುಯಾರ್ ಕ್ಷೇತ್ರದಿಂದ ಅಬ್ದುಲ್ಲಾ ಅಜಂ ಗೆದ್ದು ಬಂದಿದ್ದರು. ಆದರೆ 2017ರಲ್ಲಿ ವಿಧಾನಸಭೆ ಚುನಾವಣೆಗೆ ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ಶಾಸಕತ್ವ ರದ್ದುಪಡಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

2017ರಲ್ಲಿ ಚುನಾವಣೆ ನಡೆದ ವೇಳೆ ಅಬ್ದುಲ್ಲಾ 25ರ ಹರೆಯಕ್ಕಿಂತ ಕೆಳ ವಯಸ್ಸಿನವರಾಗಿದ್ದರು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ದಾಖಲೆಗಳನ್ನು ಫೋರ್ಜರಿ ಮಾಡಿದ್ದರು. ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಗೆ 25ರ ಹರೆಯವಾಗಬೇಕು ಎಂದು ಚುನಾವಣಾ ಆಯೋಗದ ನೀತಿಯಿದೆ.

ಸಮಾಜವಾದಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಜಿಗಿದಿರುವ ನವಾಬ್ ಕಜಿಂ ಅಲಿ ಅವರು ಅಬ್ದುಲ್ಲಾ ಅಜಂ ವಿರುದ್ಧ ದೂರು ದಾಖಲಿಸಿದ್ದರು.

See also  ಆಫ್ಘಾನಿಸ್ತಾನ: ತಾಲಿಬಾನ್ ಸರ್ಕಾರ ರಚನೆಗೆ ಕಸರತ್ತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು