News Kannada
Friday, December 09 2022

ದೇಶ-ವಿದೇಶ

ರಾಹುಲ್ ಗಾಂಧಿ ಸುಳ್ಳಿನ ಸರದಾರ: ಬಿಜೆಪಿ ಟೀಕೆ

Photo Credit :

ರಾಹುಲ್ ಗಾಂಧಿ ಸುಳ್ಳಿನ ಸರದಾರ: ಬಿಜೆಪಿ ಟೀಕೆ

ನವದೆಹಲಿ: ರಾಹುಲ್ ಗಾಂಧಿ ಸುಳ್ಳುಗಾರರ ನಾಯಕ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ನಾಯಕ ಸಂಬಿತ್ ಪಾತ್ರ ಅವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಹರಿಹಾಯ್ದರು.

ಮುಸ್ಲಿಮರ ಹಾಗೂ ಎನ್ ಆರ್ ಸಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ವಿರುದ್ಧ ರಾಹುಲ್ ಗಾಂಧಿ ಸುಳ್ಳನ್ನು ಹಬ್ಬುತ್ತಿದ್ದಾರೆ. ಎನ್ ಆರ್ ಸಿ ಬಳಿಕ ಯಾವ ಮುಸ್ಲಿಮರನ್ನು ಕೂಡ ಬಂಧನ ಶಿಬಿರದಲ್ಲಿ ಇಡಲಾಗುವುದಿಲ್ಲ ಎಂದು ಮೋದಿ ಅವರು ಹೇಳಿದ್ದರು ಎಂದು ಪಾತ್ರ ಸ್ಪಷ್ಟಪಡಿಸಿದರು.

ಎನ್ ಆರ್ ಸಿ ಬಳಿಕ ಮುಸ್ಲಿಮರನ್ನು ಯಾವುದೇ ಬಂಧನ ಕೇಂದ್ರಗಳಲ್ಲಿ ಇರಿಸಲಾಗುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದರು. ಆದರೆ ಇದನ್ನು ತಿರುಚಿ ಗಾಳಿಸುದ್ದಿ ಹಬ್ಬಲಾಗುತ್ತಿದೆ. ಪ್ರಧಾನಿ ಮೋದಿ ಅವರು ಯಾವುದೇ ಸುಳ್ಳು ಹೇಳಿಲ್ಲ ಎಂದು ಪಾತ್ರ ಹೇಳಿದರು.

ಸುಳ್ಳುಗಾರ ಮತ್ತು ಅಭಿವೃದ್ಧಿ ಮಾಡುವವರ ನಡುವಿನ ವ್ಯತ್ಯಾಸವು ಜನರಿಗೆ ತಿಳಿದಿದೆ. ಭಾರತದ ಜನರು ತುಂಬಾ ಜಾಣರು. ಒಬ್ಬ ಸುಳ್ಳುಗಾರ ಮತ್ತು ಅಭಿವೃದ್ಧಿ ಮಾಡುವವನ ನಡುವಿನ ವ್ಯತ್ಯಾಸವು ಅವರಿಗೆ ತಿಳಿದಿದೆ. ರಾಹುಲ್ ಗಾಂಧಿ ಸುಳ್ಳುಗಾರ. ಆದರೆ ಪ್ರಧಾನಿ ಮೋದಿ ಅವರು ಅಭಿವೃದ್ಧಿ ಮಾಡುವವರು ಎಂದು ಪಾತ್ರ ತಿಳಿಸಿದರು.

See also  8 ಜನ ಸಿಮಿ ಉಗ್ರರ ಎನ್‌ಕೌಂಟರ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು