News Kannada
Friday, December 02 2022

ದೇಶ-ವಿದೇಶ

ಚೀನಾ ಉದ್ದೇಶಪೂರ್ವಕವಾಗಿ ಕೊವಿಡ್-19 ಮಾಹಿತಿ ಬಚ್ಚಿಟ್ಟಿತ್ತು!

Photo Credit :

ಚೀನಾ ಉದ್ದೇಶಪೂರ್ವಕವಾಗಿ ಕೊವಿಡ್-19 ಮಾಹಿತಿ ಬಚ್ಚಿಟ್ಟಿತ್ತು!

ನವದೆಹಲಿ: ಕೊವಿಡ್-19 ಹರಡುವ ಬಗ್ಗೆ ಚೀನಾವು ಉದ್ದೇಶಪೂರ್ವಕವಾಗಿ ಕೆಲವೊಂದು ವಿಚಾರಗಳನ್ನು ವಿಶ್ವದಿಂದ ಮುಚ್ಚಿಟ್ಟಿದೆ. ಇದರ ಪರಿಣಾಮವಾಗಿ ಇದಕ್ಕೆ ಔಷಧಿ ಕಂಡುಹುಡುಕುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಪತ್ತೆದಾರಿ ದಾಸ್ತವೇಜಿನ ಪ್ರಕಾರ ಶನಿವಾರ ತಿಳಿದುಬಂದಿದೆ.

ಕೋಟ್ಯಂತರ ಮಂದಿಯ ಪ್ರಾಣ ಕಾಪಾಡುವ ಪ್ರಯತ್ನಕ್ಕೆ ಚೀನಾವು ಅಡ್ಡಿ ಮಾಡಿರುವುದು ಈಗ ಹಲವಾರು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. 15 ಪುಟಗಳ ಈ ಪತ್ತೆದಾರಿ ದಾಸ್ತವೇಜಿನಲ್ಲಿ ಚೀನಾವು ಮಾರಣಾಂತಿಕ ಸೋಂಕನ್ನು ಚೀನಾವು ನಿಭಾಯಿಸಿದ ರೀತಿಯ ಬಗ್ಗೆ ವಿವರಗಳು ಇದೆ ಎಂದು ದ ಸನ್ ವೆಬ್ ಸೈಟ್ ವರದಿ ಮಾಡಿದೆ.

ಅಮೆರಿಕಾ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ ಗುಪ್ತಚರರು  ಈ ಪತ್ತೆದಾರಿ ದಾಸ್ತವೇಜನ್ನು ನಿರ್ಮಿಸಿದ್ದಾರೆ. ಚೀನಾವು ಇದನ್ನು ರಹಸ್ಯವಾಗಿಟ್ಟ ಪರಿಣಾಮವಾಗಿ ಇದು ವಿಶ್ವದೆಲ್ಲೆಡೆಯಲ್ಲಿ ಹಬ್ಬಲು ಕಾರಣವಾಗಿದೆ ಎಂದು ಸನ್ ವರದಿ ತಿಳಿಸಿದೆ.

ಚೀನಾವು ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲವೆಂದು ಹೇಳಿತ್ತು. ಇದನ್ನು ಕೂಡ ಇದರಲ್ಲಿ ಉಲ್ಲೇಖಿಸಲಾಗಿದೆ.

See also  ಫೆ. 22ರಿಂದ ರಾಜ್ಯದಲ್ಲಿ 6ರಿಂದ 8ನೇ ತರಗತಿಗಳನ್ನು ಪ್ರಾರಂಭ: ರಾಜ್ಯ ಸರ್ಕಾರದ ಅಧಿಕೃತ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು