News Kannada
Monday, December 05 2022

ದೇಶ-ವಿದೇಶ

ಸಂಕಷ್ಟದ ಸಮಯದಲ್ಲಿ ಮನೆಗೆ ತೆರಳುವುದು ಮಾನವ ಸಹಜ ಗುಣ: ಪ್ರಧಾನಿ ಮೋದಿ

Photo Credit :

ಸಂಕಷ್ಟದ ಸಮಯದಲ್ಲಿ ಮನೆಗೆ ತೆರಳುವುದು ಮಾನವ ಸಹಜ ಗುಣ: ಪ್ರಧಾನಿ ಮೋದಿ

ನವದೆಹಲಿ: ಸಂಕಷ್ಟದ ಸಮಯದಲ್ಲಿ ಮನೆಗೆ ಹೋಗಬೇಕು ಎನ್ನುವುದು ಮನುಷ್ಯನ ಸಹಜ ಗುಣವಾಗಿದೆ ಎಂದು ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಕೊವಿಡ್-19 ನಿಯಂತ್ರಣ ಹಾಗೂ ಲಾಕ್ ಡೌನ್ ಬಗ್ಗೆ ಅವರು ಮಾತನಾಡಿದರು.

ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಅವರು ಈ ಸಭೆಯಲ್ಲಿ ಭಾಗಿಯಾದರು.

ರಾಜ್ಯ ಸರ್ಕಾರಗಳು ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಅದ್ಭುತವಾಗಿ ಕೆಲಸ ಮಾಡಿವೆ. ಅವರು ತಮ್ಮ ಜವಾಬ್ದಾರಿ ತಿಳಿದುಕೊಂಡರು ಮತ್ತು ಭೀತಿಯನ್ನು ಎದುರಿಸಿದರು. ಸಚಿವಾಲಯದ ಕಾರ್ಯದರ್ಶಿ ಅವರು ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳ ಜತೆಗೆ ಸಂಪರ್ಕದಲ್ಲಿ ಇದ್ದಾರೆ. ನಾವು ಇನ್ನಷ್ಟು ಎಚ್ಚರ ವಹಿಸಬೇಕು ಮತ್ತು ಜಾಗರೂಕರಾಗಿರಬೇಕು. ಪ್ರತಿಯೊಬ್ಬರ ಸಲಹೆಗಳನ್ನು ಪಡೆದು ಕೊರೋನಾ ವಿರುದ್ಧದ ಹೋರಾಟಕ್ಕೆ ರೂಪುರೇಷೆಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ದೇಶವು ತನ್ನನ್ನು ರಕ್ಷಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರವು ಜನರು ಎಲ್ಲಿದ್ದೀರೋ ಅಲ್ಲೇ ಇರುವಂತೆ ಸೂಚಿಸಿತ್ತು. ಆದರೆ ಇದರ ಹೊರತಾಗಿಯೂ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಮುಂದಾದರು. ಇದು ಸಂಕಷ್ಟದ ಸಮಯದಲ್ಲಿ ಮನೆಯಲ್ಲಿ ಇರಬೇಕು ಎನ್ನುವುದು ಮಾನವ ಸಹಜ ಗುಣವಾಗಿದೆ. ಇದರಿಂದಾಗಿ ಸರ್ಕಾರ ಕೆಲವು ಬದಲಾವಣೆ ಮಾಡಿತು ಎಂದರು.

ಗ್ರಾಮಗಳಿಗೆ ಸೋಂಕು ಹರಡದಂತೆ ತಡೆಯುವಂತಹ ಮಹತ್ತರ ಜವಾಬ್ದಾರಿಯು ನಮ್ಮ ಮೇಲಿದೆ ಎಂದು ಅವರು ತಿಳಿಸಿದರು.

See also  ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ : 12 ಪುಟಗಳಲ್ಲೂ ರಾರಾಜಿಸುತ್ತಿರುವ ಮೋದಿಯ ಚಿತ್ರ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು