News Kannada
Thursday, October 06 2022

ದೇಶ-ವಿದೇಶ

ಗೂಗಲ್ ಪ್ಲೆ ಸ್ಟೋರ್ ನಲ್ಲಿ ಪೇಟಿಎಮ್ ಮೊಬೈಲ್ ಅಪ್ಲಿಕೇಶನ್ ಇನ್ನು ಲಭ್ಯವಿಲ್ಲ - 1 min read

Photo Credit :

ಗೂಗಲ್ ಪ್ಲೆ ಸ್ಟೋರ್ ನಲ್ಲಿ ಪೇಟಿಎಮ್ ಮೊಬೈಲ್ ಅಪ್ಲಿಕೇಶನ್ ಇನ್ನು ಲಭ್ಯವಿಲ್ಲ

ನವದೆಹಲಿ: ಡಿಜಿಟಲ್ ಪಾವತಿಗಳ ಪ್ರಮುಖ ಆಫ್ ಗಳಲ್ಲಿ ಒಂದಾಗಿದ್ದ ಪೇಟಿಎಮ್ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೆ ಸ್ಟೋರ್ ನಿಂದ ತೆಗೆದುಹಾಕಲಾಗಿದೆ.  ಗೇಮಿಂಗ್ ಮತ್ತು ಬೆಟ್ಟಿಂಗ್ ಕುರಿತ ನೀತಿಗಳನ್ನು ಉಲ್ಲಂಘಿಸಿರುವುದು ಈ ಕ್ರಮಕ್ಕೆ ಕಾರಣವೆಂದು ಉಲ್ಲೇಖಿಸಿದೆ.

ಆಪಲ್ ಐಒಎಸ್ ನಲ್ಲಿ ಪೇಟಿಎಮ್ ಆಫ್ ಇನ್ನು ಲಭ್ಯವಿದೆ, ಆಪಲ್ ನಡೆಸುವ ಪ್ಲೇ ಸ್ಟೋರ್ ಗಳಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 

“ಹೊಸ ಡೌನ್‌ಲೋಡ್‌ಗಳು ಅಥವಾ ನವೀಕರಣಗಳಿಗೆ ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್ ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ತಾತ್ಕಾಲಿಕವಾಗಿ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಹಿಂತಿರುಗಲಿದೆ” ಎಂದು ಪೇಟಿಎಂ ನಿರ್ವಾಹಕರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ‌.

ಪೆಟಿಎಂ ಬಳಕೆದಾರರು ಚಿಂತೆಗಿಡಾಗುವ ಯಾವುದೇ ಅವಶ್ಯಕತೆ  ಇಲ್ಲ. ನಿಮ್ಮ ಎಲ್ಲಾ ಹಣವು ಸುರಕ್ಷಿತವಾಗಿದೆ ಮತ್ತು ಗ್ರಾಹಕರು ಎಂದಿನಂತೆ ತಮ್ಮ ನಿಯಮಿತ ವಹಿವಾಟಿಗೆ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಕಂಪೆನಿ ಭರವಸೆ ನೀಡಿತು.

ಗೂಗಲ್ ಇಂತಹ ಹೆಜ್ಜೆಯನ್ನು ಇಡುತ್ತಿರುವುದು ಇದೇ  ಮೊದಲಲ್ಲ.  ಈ ಹಿಂದೆ, ಗೂಗಲ್ ಮತ್ತೊಂದು ಪಾವತಿ ಅಪ್ಲಿಕೇಶನ್ ಮೊಬಿಕ್ವಿಕ್ ಅನ್ನು ತೆಗೆದುಹಾಕಿದೆ, ಅದು ತನ್ನ ಬಳಕೆದಾರರನ್ನು ಆರೋಗ್ಯ ಸೇತು ಅಪ್ಲಿಕೇಶನ್‌ಗೆ ಮರುನಿರ್ದೇಶಿಸುತ್ತಿದೆ ಎಂಬ ಕಾರಣವನ್ನು ನೀಡಿತ್ತು.

ಪೇಟಿಎಂ ಆಫ್ ತೆಗೆದ ನಂತರ ಸೆಪ್ಟೆಂಬರ್ 18 ರಂದು ಗೂಗಲ್ ಬ್ಲಾಗ್‌ನಲ್ಲಿ, ಆನ್‌ಲೈನ್ ಕ್ಯಾಸಿನೊಗಳನ್ನು ಅನುಮತಿಸುವುದಿಲ್ಲ ಅಥವಾ ಕ್ರೀಡಾ ಬೆಟ್ಟಿಂಗ್‌ಗೆ ಅನುಕೂಲವಾಗುವ ಅನಿಯಂತ್ರಿತ ಜೂಜಿನ ಅಪ್ಲಿಕೇಶನ್‌ಗಳನ್ನು ಬೆಂಬಲಿಸುವುದಿಲ್ಲ ಎಂದು  ಹೇಳಿದೆ.

“ಇದು ಒಂದು ಅಪ್ಲಿಕೇಶನ್ ಗ್ರಾಹಕರನ್ನು ಬಾಹ್ಯ ವೆಬ್‌ಸೈಟ್‌ಗೆ ಕರೆದೊಯ್ಯುತ್ತಿದ್ದರೆ, ಅದು ನಿಜವಾದ ಹಣ ಅಥವಾ ನಗದು ಬಹುಮಾನಗಳನ್ನು ಗೆಲ್ಲಲು ಪಾವತಿಸಿದ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ, ಅದು ನಮ್ಮ ನೀತಿಗಳ ಉಲ್ಲಂಘನೆಯಾಗಿದೆ” ಎಂದು ಬ್ಲಾಗ್ ನಲ್ಲಿ ಗೂಗಲ್ ಪೋಸ್ಟ್ ಮಾಡಿದೆ.

See also  ಇಸ್ಲಾಮಿಕ್ ರಾಷ್ಟ್ರಗಳಿಂದ ಬರುವ ಜನರನ್ನು ನಿಯಂತ್ರಿಸಲು ಕಠಿಣ ನಿಯಮಗಳನ್ನು ವಿಧಿಸಿದ ಟ್ರಂಪ್ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು