News Kannada
Monday, October 03 2022

ದೇಶ-ವಿದೇಶ

ದೇಶದ ಎಂಟು ಕಡಲ ತೀರಗಳು ಪ್ರತಿಷ್ಠಿತ ‘ ಬ್ಲೂ ಫ್ಲಾಗ್ ‘ ಪ್ರಮಾಣ ಪತ್ರಕ್ಕೆ ಶಿಫಾರಸು - 1 min read

Photo Credit :

ದೇಶದ ಎಂಟು ಕಡಲ ತೀರಗಳು ಪ್ರತಿಷ್ಠಿತ ' ಬ್ಲೂ ಫ್ಲಾಗ್ ' ಪ್ರಮಾಣ ಪತ್ರಕ್ಕೆ ಶಿಫಾರಸು

ನವದೆಹಲಿ: ದೇಶದ ಎಂಟು ಕಡಲ ತೀರಗಳನ್ನು ಪ್ರತಿಷ್ಠಿತ ‘ ಬ್ಲೂ ಫ್ಲಾಗ್ ‘ ಪ್ರಮಾಣ ಪತ್ರಕ್ಕೆ ಶಿಫಾರಸು ಮಾಡಲಾಗಿದೆ.

ಅದರಲ್ಲಿ ಉಡುಪಿಯ ಪಡುಬಿದ್ರಿಯ ಕಡಲತೀರ ಹಾಗೂ ಉತ್ತರ ಕನ್ನಡ ಹೊನ್ನಾವರದ ಇಕೋ ಬೀಚ್ ಸೇರಿದೆ ಎಂದು ಕೇಂದ್ರ ಪರಿಸರ , ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ.

ದಿಯು ಮತ್ತು ದಾಮನ್‌ನ ಪ್ರೊಗ್ಲಾ ಕೇರಳದ ಕಪ್ಪದ್, ಆಂಧ್ರಪ್ರದೇಶದ ಋಷಿಕೊಂಡ , ಒಡಿಶಾದ ಗೋಲ್ಡನ್ ಬೀಚ್ , ಗುಜರಾತ್ ರಾಜ್ಯದ ಶಿವರಾಜಪುರ  ,   ಅಂಡಮಾನ್ ಮತ್ತು ನಿಕೋಬಾರ್‌ನ ಲಾರಾನಗರ ಕಡಲತೀರಗಳು ಶಿಫಾರಸಿಗೆ ಗುರುತಿಸಲಾಗಿರುವ ಇತರ ಕಡಲ ತೀರಗಳಗಿವೆ ಎಂದು ಹೇಳಿದ್ದಾರೆ.

ಶಿಫಾರಸು ಪ್ರಕ್ರಿಯೆಯ ಭಾಗವಾಗಿ ಸೆಪ್ಟೆಂಬರ್‌ 18 ರಂದು ಈ ಎಂಟೂ ಕಡಲತೀರಗಳಲ್ಲಿ ಏಕಕಾಲಕ್ಕೆ, ನಾನು ಕಡಲತೀರವನ್ನು ರಕ್ಷಿಸುತ್ತೇನೆ ‘ ಎಂಬ ಧ್ವಜಾರೋಹಣ ಮಾಡಿ ಕೆಲಸವನ್ನು ಆರಂಭಿಸಲಾಯಿತು.

ಪರಿಸರ ಸ್ನೇಹಿ ವಾತಾವರಣ, ಕಡಲತೀರದ ಸ್ವಚ್ಛತೆ , ಸುರಕ್ಷತೆ ಮುಂತಾದ ಅಂಶಗಳನ್ನು ಪರಿಗಣಿಸಿ ‘ ಬ್ಲೂ ಬ್ಲಾಗ್ ಪ್ರಮಾಣಪತ್ರವನ್ನು ‘ ಪರಿಸರ ಶಿಕ್ಷಣಕ್ಕಾಗಿ ವೇದಿಕೆ ‘ ( ಎಫ್‌ಇಇ ) ನೀಡುತ್ತದೆ.

ಈ ಬಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಸಚಿವ ಪ್ರಕಾಶ ಜಾವಡೇಕರ್ ಹಂಚಿಕೊಂಡಿದ್ದು , ಬ್ಲೂ ಫ್ಲಾಗ್ ಪ್ರಮಾಣಪತ್ರ ಪಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಮ್ಮ ದೇಶದ ಪರಿಣತರನ್ನು ಒಳಗೊಂಡ ಸ್ವತಂತ್ರ ತಂಡವು ಕೆಲಸಮಾಡಲಿದೆ. ಇದರಲ್ಲಿ ದೇಶದ ಪ್ರಸಿದ್ಧ ಪರಿಸರ ತಜ್ಞರು ವಿಜ್ಞಾನಿಗಳು ಸೇರಿದ್ದಾರೆ ಎಂದಿದ್ದಾರೆ.

See also  ಉಗ್ರರ ವಿರುದ್ಧ ಪ್ರತಿದಾಳಿ ನಡೆಸಿದ ಸೈನಿಕರು: ನಾಲ್ಕು ಉಗ್ರರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು