News Kannada
Tuesday, October 04 2022

ದೇಶ-ವಿದೇಶ

ದೆಹಲಿ ಗಲಭೆ: ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಗೆ ಅ. 22ರವರೆಗೆ ನ್ಯಾಯಾಂಗ ಕಸ್ಟಡಿ - 1 min read

Photo Credit :

ದೆಹಲಿ ಗಲಭೆ: ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಗೆ ಅ. 22ರವರೆಗೆ ನ್ಯಾಯಾಂಗ ಕಸ್ಟಡಿ

ನವದೆಹಲಿ: ದೆಹಲಿ ಗಲಭೆ ಆರೋಪದ ಮೇಲೆ ಸೆ. 13ರಂದು ಬಂಧನಕ್ಕೊಳಗಾದ ಮಾಜಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ನನ್ನು ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆಯಡಿ ಅ.22 ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ದೆಹಲಿಯ ಕಾರ್ಕಾರ್ಡೂಮಾ ನ್ಯಾಯಾಲಯವು ಗುರುವಾರ (ಸೆ. 24) ಆದೇಶ ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಅವರ ಮುಂದೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉಮರ್ ಖಾಲಿದ್ ನನ್ನು ಹಾಜರುಪಡಿಸಲಾಯಿತು. ದೆಹಲಿ ಪೊಲೀಸರು ಆತನನ್ನು ಹೆಚ್ಚುವರಿ ಕಸ್ಟಡಿಗೆ ಕೋರಿಲ್ಲದ ಕಾರಣ ಉಮರ್ ಅವರನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.

ಫೆ. 24 ರಂದು ಈಶಾನ್ಯ ದೆಹಲಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ಬೆಂಬಲಿಗರು ಮತ್ತು ಶಾಸನಕ್ಕೆ ವಿರುದ್ಧವಾಗಿದ್ದವರ ನಡುವಿನ ಹಿಂಸಾಚಾರವು ನಂತರ ಕೋಮು ಸಂಘರ್ಷವಾಗಿ ಪರಿವರ್ತನೆ ಆಗಿತ್ತು. ಇದರಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದರು ಮತ್ತು ಸುಮಾರು 200 ಜನರು ಗಾಯಗೊಂಡರು.

ದೆಹಲಿಯಲ್ಲಿ ನಡೆದ ಈ ಭುಗಿಲೆದ್ದ ಕೋಮು ಹಿಂಸಾಚಾರವು “ಪೂರ್ವನಿಯೋಜಿತ ಪಿತೂರಿ” ಎಂದು ಉಮರ್ ವಿರುದ್ಧ ಎಫ್ಐಆರ್ ನಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ಉಮರ್ ಹಾಗೂ ಇನ್ನೂ ಇಬ್ಬರು ಸೇರಿ ಆಯೋಜಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ದೇಶದ್ರೋಹ, ಕೊಲೆ, ಕೊಲೆ ಯತ್ನ, ಧರ್ಮ ಮತ್ತು ಗಲಭೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧಗಳ ಮೇಲೂ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದೆ.

See also  ಬಿಜೆಪಿ ಮತ್ತೇ ಅಧಿಕಾರಕ್ಕೆ ಬಂತೆಂದು ಮುಸ್ಲಿಮರು ಚಿಂತಿಸಬೇಡಿ: ಓವೈಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು