News Kannada
Thursday, September 29 2022

ದೇಶ-ವಿದೇಶ

20 ವರ್ಷಗಳಿಂದ ಧಣಿವರಿಯದೆ ಜನಸೇವೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ - 1 min read

Photo Credit :

20 ವರ್ಷಗಳಿಂದ ಧಣಿವರಿಯದೆ ಜನಸೇವೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ತಮ್ಮ ರಾಜಕೀಯ ಬದುಕಿನಲ್ಲಿ ಅನೇಕ ಸಾಧನೆಗಳನ್ನು ಮಾಡಿರುವ ಹಾಗೂ ಎಲ್ಲರ ಪ್ರಶಂಸೆಗೆ ಪಾತ್ರವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ತಮ್ಮ ಕಾರ್ಯ ಕೌಶಲತೆಯ ಕನ್ನಡಿಯನ್ನು ಎಲ್ಲರೆದುರು ಇರಿಸುತ್ತಾರೆ. 20 ವರ್ಷಗಳ ಕಾಲ ಚುನಾವಣೆಗಳಲ್ಲಿ ಒಮ್ಮೆಯೂ ಸೋಲು ಕಾಣದೇ ಯಶಸ್ವಿ ಚುನಾಯಿತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜನಪ್ರತಿನಿಧಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ತನ್ನ ಕಾರ್ಯ ನಿಷ್ಠೆಯನ್ನು ತೋರುತ್ತ ಬಂದಿರುವ ಮೋದಿಯವರನ್ನು ಬಿಜೆಪಿ ಶ್ಲಾಘಿಸಿದೆ.

‘ಗುಜರಾತ್‌ ರಾಜ್ಯದ ಮುಖ್ಯಮಂತ್ರಿಯಗಿದ್ದಾಗಲಿ ಅಥವಾ ವಿಶ್ವದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗಿವಾಗಲಿ ಮೋದಿಜಿ ಅವರು ಸದಾ ಜನರ ಕಲ್ಯಾಣಕ್ಕಾಗಿ ಹಾಗೂ ಹೇಳಿಕೆಗಾಗಿ ದುಡಿಯುತ್ತಿದ್ದಾರೆ’ ಎಂದು ಬಿಜೆಪಿ ಅವರ ಕಾರ್ಯದಕ್ಷತೆಯನ್ನು ಪ್ರಶಂಸಿಸಿತು.

’20 ವರ್ಷಗಳ ಕಾಲ ಬದ್ಧತೆ, ದೂರದರ್ಶಿತ್ವ ಹಾಗೂ ನಿಸ್ವಾರ್ಥವಾಗಿ ಭಾರತ ಮಾತೆಗೆ ಸೇವೆ ಸಲ್ಲಿಸಿರುವ ಮೋದಿಯವರ ಕಾರ್ಯದಕ್ಷತೆ ಮೆಚ್ಚಬೇಕಾದ್ದು. ಪ್ರಜಾಪ್ರಭುತ್ವದ ಅನುಸಾರ ಆಯ್ಕೆಯಾಗಿ 20 ವರ್ಷಗಳಿಂದ ನಿರಂತರವಾಗಿ ಜನರ ಪ್ರೀತಿ ಹಾಗೂ ನಂಬಿಕೆಯನ್ನು ಗಳಿಸಿ, ಅವರ ಸೇವೆಯಲ್ಲಿ ತಮ್ಮನ್ನು ತಾವು ನಿರುತ್ತರನಾಗಿ ಸಿಕೊಂಡಿರುವ ವಿಶ್ವದ ಅಪರೂಪದ ನಾಯಕ ಮೋದಿ ಅವರಿಗೆ ಅಭಿನಂದನೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಹರದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ‘2001ರ ಅಕ್ಟೋಬರ್ 7 ರಂದು ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಏಕೆಂದರೆ ಆ ದಿನ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರವಹಿಸಿಕೊಂಡಿದ್ದರು’ ಎಂದು ಹೇಳಿದರು.

ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ ಟ್ವೀಟ್ ಮೂಲಕ, ‘ಗುಜರಾತ್‌ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ನರೇಂದ್ರಮೋದಿಯವರು ಇವರಿಗೆ 6941 ದಿನಗಳನ್ನು ಯಶಸ್ವೀಯಾಗಿ ಪೂರೈಸಿದ್ದಾರೆ. ಅವರು ಎಂದು ತನ್ನ ಬಗ್ಗೆ ಯೋಚಿಸದೇ, ಸಾರ್ವಜನಿಕರ ಕಲ್ಯಾಣಕ್ಕಾಗಿ ದುಡಿದಿರುವರು. ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಆರೋಪಗಳನ್ನು ಎದುರಿಸಿದ್ದನ್ನು ನಾನು ಕಾಣಲಿಲ್ಲ’ ಎಂದು ತಮ್ಮ ಮಾತುಗಳನ್ನು ಹಂಚಿಕೊಳ್ಳುತ್ತಾರೆ.

“ಚುನಾವಣಾ ಪ್ರಣಾಳಿಕೆಯನ್ನು ಆಡಳಿತದ ದೃಷ್ಟಿ ದಾಖಲೆಯಾಗಿ ಅಳವಡಿಸಿಕೊಳ್ಳಬೇಕು ಮತ್ತು ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅದನ್ನು ತಲುಪಿಸಬೇಕು ಎಂದು ಪ್ರಧಾನಿ ಖಚಿತಪಡಿಸಿದ್ದಾರೆ” ಎಂದು ಪಕ್ಷದ ಹಿರಿಯ ಸದಸ್ಯರೊಬ್ಬರು ಹೇಳಿದರು.

See also  ಮಾಸ್ಕ್ ಗಳನ್ನು ಕುರ್ಚಿಗಳನ್ನಾಗಿ ಮರುಬಳಕೆ ಮಾಡಿದ ದಕ್ಷಿಣ ಕೊರಿಯ ವಿದ್ಯಾರ್ಥಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು