News Kannada
Thursday, October 06 2022

ದೇಶ-ವಿದೇಶ

ಬ್ಯಾಂಕ್‌ ಉದ್ಯೋಗಿಗಳ ವೇತನದಲ್ಲಿ ಶೇಕಡ 15ರಷ್ಟು ಹೆಚ್ಚಳ - 1 min read

Photo Credit :

ಬ್ಯಾಂಕ್‌ ಉದ್ಯೋಗಿಗಳ ವೇತನದಲ್ಲಿ ಶೇಕಡ 15ರಷ್ಟು ಹೆಚ್ಚಳ

ಮುಂಬೈ: ಬ್ಯಾಂಕ್‌ ಉದ್ಯೋಗಿ ಗಳಿಗೆ ಸಂಬಂಧಿಸಿ 11ನೇ ದ್ವಿಪಕ್ಷೀಯ ವೇತನ ಮಾತುಕತೆ ಬುಧವಾರ ನಡೆದಿದೆ. ಬ್ಯಾಂಕ್‌ಗಳ ಉದ್ಯೋಗಿಗಳ ವೇತನದಲ್ಲಿ ಶೇಕಡ 15ರಷ್ಟು ಹೆಚ್ಚಳವಾಗಲಿದೆ.

ಈ ಹೆಚ್ಚಳವು 2017ರ ನವೆಂಬರ್ 1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದ್ದು, ಐದು ವರ್ಷಗಳ ಅವಧಿಗೆ ಜಾರಿಯಲ್ಲಿ ಇರಲಿದೆ.

ಒಟ್ಟು 37 ಸರ್ಕಾರಿ, ಖಾಸಗಿ ಹಾಗೂ ವಿದೇಶಿ ಬ್ಯಾಂಕ್‌ಗಳು ಒಟ್ಟಾಗಿ, ನೌಕರರ ವೇತನ ಹೆಚ್ಚಳದ ಕುರಿತು ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸುವಂತೆ ‘ಭಾರತೀಯ ಬ್ಯಾಂಕ್‌ಗಳ ಒಕ್ಕೂಟ’ಕ್ಕೆ (ಐಬಿಎ) ಸೂಚಿಸಿದ್ದವು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ 3.79 ಲಕ್ಷ ಅಧಿಕಾರಿಗಳು, ಹಳೆಯ ತಲೆಮಾರಿನ ಖಾಸಗಿ ಬ್ಯಾಂಕ್‌ಗಳು, ಸರ್ಕಾರಿ ಬ್ಯಾಂಕ್‌ಗಳು, ವಿದೇಶಿ ಬ್ಯಾಂಕ್‌ಗಳ ಅಂದಾಜು 5ಲಕ್ಷ ಉದ್ಯೋಗಿಗಳಿಗೆ ಪ್ರಯೋಜನ ಆಗಲಿದೆ. ಉತ್ತಮವಾಗಿ ಕೆಲಸ ಮಾಡುವವರ ಸಾಧನೆ ಆಧರಿಸಿದ ಪ್ರೋತ್ಸಾಹಧನ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಐಬಿಎ ಹೇಳಿದೆ.

See also  ಮೇಕೆಗಳನ್ನು ಮಾರಿ ಗ್ರಾಮಕ್ಕೆ ಶೌಚಾಲಯ ನಿರ್ಮಿಸಿಕೊಟ್ಟ ಅಜ್ಜಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು