ಜಿನಿವಾ: ಲಸಿಕೆ ಇಲ್ಲದೆಯೂ ಕೋವಿಡ್-19 ನಿಯಂತ್ರಿಸಬಹುದು ಎಂದು ಕೆಲವೊಂದು ರಾಷ್ಟ್ರಗಳು ತೋರಿಸಿಕೊಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದರು.
ಎಲ್ಲಾ ರಾಷ್ಟ್ರಗಳಿಗೆ ಕೊರೋನಾದ ಪ್ರಭಾವ ಬೀರಿದೆ. ಆದರೆ ಎಲ್ಲಾ ರಾಷ್ಟ್ರಗಳಿಗೆ ಒಂದೇ ರೀತಿಯ ಪರಿಣಾಮವಾಗಿಲ್ಲ. ಆದರೆ ಕೆಲವೊಂದು ರಾಷ್ಟ್ರಗಳು ಕೋವಿಡ್-19ನ್ನು ಲಸಿಕೆ ಇಲ್ಲದೆಯೂ ನಿಯಂತ್ರಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿವೆ ಎಂದರು.
ಪರೀಕ್ಷೆಯಲ್ಲಿ ಎಲ್ಲಾ ರಾಷ್ಟ್ರಗಳು ಒಂದೇ ರೀತಿಯ ಮಾನದಂಡವನ್ನು ಅನುಸರಿಸಿಕೊಂಡಿವೆ ಎಂದು ಹೇಳಿದರು.
ಸಾಂಕ್ರಾಮಿಕವು ಆರಂಭವಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಪರೀಕ್ಷೆಗೆ ಉಪಕರಣಗಳನ್ನು ನೀಡಿವೆ ಮತ್ತು ಎಲ್ಲಾ ರಾಷ್ಟ್ರಗಳು ಇವುಗಳನ್ನು ಸರಿಯಾಗಿ ಬಳಸಿಕೊಂಡಿವೆ ಎಂದು ಘೆಬ್ರೆಯೆಸಸ್ ತಿಳಿಸಿದರು.