ನವದೆಹಲಿ: ದೇಶದಲ್ಲಿ ಒಂದೇ ದಿನದಲ್ಲಿ ಒಟ್ಟು 31,118 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 94.62 ಲಕ್ಷ ದಾಟಿದೆ.
ಚೇತರಿಕೆ ಪ್ರಮಾಣವು ಹೆಚ್ಚಾಗಿದ್ದು, ಒಟ್ಟು 88,89,585 ಮಂದಿ ಕೊರೋನಾ ಸೋಂಕಿನಿಂ ಗುಣಮುಖರಾಗಿರುವರು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.
482 ಮಂದಿ ಸಾವನ್ನಪ್ಪುವುದರ ಜತೆಗೆ ಸಾವಿನ ಸಂಖ್ಯೆಯು ಒಟ್ಟು 1,37,621 ಆಗಿದೆ. ಕೇಂದ್ರ ಸರ್ಕಾರವು ಡಿ.1ರಂದು ಈ ಮಾಹಿತಿ ನೀಡಿದೆ. ಆದರೆ ಕಳೆದ ಒಂದು ತಿಂಗಳಲ್ಲಿ ಕೋವಿಡ್-19ನ ಪ್ರತಿನಿತ್ಯದ ಪ್ರಕರಣದಲ್ಲಿ ತುಂಬಾ ಇಳಿಕೆ ಕಂಡುಬಂದಿದೆ.