ಚೆನ್ನೈ: ನಟ ರಜನಿಕಾಂತ್ ಅವರು 24 ವರ್ಷಗಳ ಹಿಂದೆ ನೀಡಿದ ಹೇಳಿಕೆಗೆ ಇಂದು ಅಥವಾ ನಾಳೆ ಒಂದು ನಿಲುವು ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಹೌದು, 1996 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಚುನಾವಣಾ ಸಮಯದಲ್ಲಿ ನಟ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದರು. ಅದಾದ ನಂತರ ಹಲವಾರು ಚರ್ಚೆ ಹಾಗೂ ಮಾತುಕತೆಗಳಿಗೆ ಕಾರಣವಾಗಿದ್ದ ವಿಷಯಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಸೋಮವಾರ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿದ ರಜಿನಿ ಮಕ್ಕಲ್ ಮಂದಿರಂ (ಆರ್ಎಂಎಂ) ಜಿಲ್ಲಾ ಕಾರ್ಯದರ್ಶಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಜಿನಿ ತಮ್ಮ ನಿರ್ಧಾರವನ್ನು “ಇಂದು ಅಥವಾ ನಾಳೆ” ಪ್ರಕಟಿಸುವುದಾಗಿ ಹೇಳಿದರು. ಸ್ವಲ್ಪ ಸಮಯದ ನಂತರ, ರಜನಿ ತಮ್ಮ ಪೋಸ್ ಗಾರ್ಡನ್ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿ “ನಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರಲು ಜಿಲ್ಲಾ ಕಾರ್ಯದರ್ಶಿಗಳು ಒಪ್ಪಿದ್ದಾರೆ. ನನ್ನ ನಿರ್ಧಾರವನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ” ಎಂದಿದ್ದಾರೆ.