ನವದೆಹಲಿ: ರೈತ ನಾಯಕರೊಂದಿಗೆ ಮಾತುಕತೆ ನಡೆಸಿದ್ದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈಲ್ವೆ ಸಚಿವ ಪಿಯೂಸ್ ಗೋಯಲ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಪಂಜಾಬ್ ಹಾಗೂ ಹರ್ಯಾಣದಿಂದ ಬಂದಿದ್ದ ರೈತರು ದೆಹಲಿಯ ಗಡಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ರೈತ ನಾಯಕರೊಂದಿಗೆ ಕೆಲವು ಪ್ರಮುಖ ಸಚಿವರು ಮಾತುಕತೆ ನಡೆಸಿದ್ದರು.
ಮೂರನೇ ಸುತ್ತಿನ ಮಾತುಕತೆ ನಡೆಸುವ ಮೊದಲು ಕೃಷಿ ಸಚಿವರಾದ ತೋಮರ್ ಮತ್ತು ಪಿಯೂಸ್ ಗೋಯಲ್ ಅವರು ಗೃಹ ಸಚಿವರನ್ನು ಭೇಟಿ ಮಾಡಿ ಅವರಿಗೆ ವರದಿ ನೀಡಿದರು.
ಕೃಷಿ ನಾಯಕರು ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದು, ಇದನ್ನು ಸರ್ಕಾರ ಈಡೇರಿಸಬೇಕು ಎಂದು ಪಟ್ಟು ಹಿಡಿದಿದೆ.