ನವದೆಹಲಿ: ಮಹಿಳೆಯರ ವಿರುದ್ಧ ದಿನೇದಿನೇ ಅಪರಾಧಗಳು ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ‘ಮಿಷನ್ ಶಕ್ತಿ’ ವಿಫಲವಾಗಿದೆ. ಅವರು ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ಅಸಫಲರಾಗಿದ್ದಾರೆ ಎಂದು ಕಿಡಿಕಾರಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ.
ತಮ್ಮ ಟ್ವೀಟ್ ಮೂಲಕ ಪ್ರಿಯಾಂಕ ಗಾಂಧಿ “ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅಪರಾಧಗಳನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರ ಪ್ರಾರಂಭಿಸಿರುವ ಮಿಷನ್ ಶಕ್ತಿ ವಿಫಲವಾಗಿದೆ. ಇಲ್ಲಿ ಮಹಿಳೆಯೊಬ್ಬರ ಮೇಲೆ ಬೆಂಕಿ ಹಚ್ಚಿದ ಆರೋಪಿಗಳ ವಿರುದ್ಧ, ಘಟನೆ ಸಂಭವಿಸಿದ ಒಂದು ತಿಂಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಎಲ್ಲ ಪ್ರಕರಣಗಳು ಸಾಬೀತುಪಡಿಸುತ್ತಿದೆ, ಬೂಟಾಟಿಕೆ ಮತ್ತು ಸುಳ್ಳು ಪ್ರಚಾರಗಳು ಸರ್ಕಾರದ ಗುರಿಯಾಗಿದ್ದರೆ, ಈ ರೀತಿಯ ಮಿಷನ್ಗಳು ವಿಫಲವಾಗುತ್ತದೆ ‘ ಎಂದು ದೂರಿದರು.
ಕೆಲಕಾಲದ ಹಿಂದೆ ಎಷ್ಟೇ ವಿವಾದಕ್ಕೆ ಗುರಿಯಾಗಿದ್ದ ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣದ ಸಮಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂಬ ಎಚ್ಚರಿಕೆ ಯೋಗಿ ಆದಿತ್ಯನಾಥ ಸರ್ಕಾರ ನೀಡಿತ್ತು. ಅದರೊಂದಿಗೆ ಮಹಿಳೆಯರ ಸುರಕ್ಷತೆ ಮತ್ತು ಘನತೆ ಕಾಪಾಡುವ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ‘ ಮಿಷನ್ ಶಕ್ತಿ ‘ ಅಭಿಯಾನಕ್ಕೆ ಚಾಲನೆ ನೀಡಿತು. ಆದರೆ ಬದೋಹಿಯಲ್ಲಿ 21 ವರ್ಷದ ಯುವತಿಯನ್ನು ಮನೆಯೊಳಗೆ ಸುಟ್ಟುಹಾಕಲಾಗಿತ್ತು. ಆದರೆ ಈ ಸಂಬಂಧ ಪ್ರಕರಣವನ್ನು ಒಂದು ತಿಂಗಳ ಬಳಿಕ ದಾಖಲಿಸಲಾಗಿದೆ. ಇದು ವಿಫಲತೆಯ ರೂಪವಲ್ಲದೆ ಬೇರೇನು ಎಂಬುವಂತೆ ಮಾತುಗಳು ಕೇಳಿಬರುತ್ತಿದೆ.