ವಾಷಿಂಗ್ಟನ್: ಭಾರತೀಯ – ಅಮೆರಿಕನ್ ವೈದ್ಯ ಡಾ.ವಿವೇಕ್ ಮೂರ್ತಿ ಅವರನ್ನು ಅಮೆರಿಕದ ಮುಂದಿನ ಸರ್ಜನ್ ಜನರಲ್ ಹುದ್ದೆಗೆ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ನೇಮಕ ಮಾಡಿದ್ದಾರೆ.
ಶೀಘ್ರದಲ್ಲೇ ಅಧಿಕೃತ ನೇಮಕಾತಿ ಆದೇಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಒಬಾಮ ಆಡಳಿತದಲ್ಲಿ ಈ ಹುದ್ದೆಗೆ ನಿಯೋಜನೆಗೊಂಡಿದ್ದ 43ರ ಹರೆಯದ ವಿವೇಕ್ ಮೂರ್ತಿ ಅವರು, ಟ್ರಂಪ್ ಆಡಳಿತದ ವೇಳೆ ಇದ್ದಕ್ಕಿದ್ದಂತೆ ಈ ಹುದ್ದೆಯಿಂದ ನಿರ್ಗಮಿಸಿದ್ದರು. ಈಗ ಜೋ ಬೈಡನ್ ಅವರ ‘ಕೋವಿಡ್ 19‘ ಸಲಹಾ ಮಂಡಳಿಯ ಮೂವರು ಸಹ ಅಧ್ಯಕ್ಷರ ಸಮಿತಿಯಲ್ಲಿ ಒಬ್ಬರಾಗಿದ್ದಾರೆ.
‘ಅಮೆರಿಕದ ಹೊಸ ಆಡಳಿತದಲ್ಲಿ ಸರ್ಜನ್ ಜನರಲ್ ಹುದ್ದೆಯನ್ನು ನಿರ್ವಹಿಸುವಂತೆ ಅಮೆರಿಕದ ಮಾಜಿ ಪ್ರಧಾನ ಸರ್ಜನ್ ಜನರಲ್ ವಿವೇಕ್ ಎಚ್. ಮೂರ್ತಿ ಅವರನ್ನು ಕೇಳಲಾಗಿದೆ‘ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.