ನವದೆಹಲಿ: ಕಳೆದ ೨೪ಗಂಟೆಯಲ್ಲಿ ದಾಖಲಾದ ೩೬,೬೫೨ ಕೊರೊನಾ ಸೋಂಕು ಪ್ರಕರಣಗಳೊಂದಿಗೆ ದೇಶಧಲ್ಲಿ ಇದೀಗ ಸೋಂಕಿತರ ಸಂಖ್ಯೆ ೯೬,೦೮,೨೧೧ಕ್ಕೆ ಏರಿದೆ.
ಕಳೆದ ೨೪ಗಂಟೆಯಲ್ಲಿ ೫೧೨ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ೧,೩೯,೭೦೦ಕ್ಕೆ ಏರಿದೆ. ಪ್ರಸ್ತುತ ದೇಶದಲ್ಲಿ ೪,೦೯,೬೮೯ ಕೊರೊನಾ ಸೋಂಕಿತರಿದ್ದಾರೆ. ೯೦,೫೮,೮೨೨ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.