ನವದೆಹಲಿ: ಖಾಸಗಿ ವಾಹಿನಿಗಳು ಕಾನೂನು ಉಲ್ಲಂಘಿಸಿ ಯಾವುದೇ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.
ದೇಶದಲ್ಲಿ ಕಾನೂನು ಅಥವಾ ಸರಕಾರದಿಂದ ನಿಷೇಧಿಸಲ್ಪಟ್ಟ ಜಾಹೀರಾತುಗಳನ್ನು ಮಾಧ್ಯಮಗಳು ಪ್ರಸರಿಸುವಂತಿಲ್ಲ. ಮಾಧ್ಯಮಗಳಲ್ಲಿ ಆನ್ಲೈನ್ ಗೇಮಿಂಗ್, ಫ್ಯಾಂಟಸಿ ಗೇಮ್ ಅಥವಾ ಸ್ಫೋರ್ಟ್ಸ್ ಇತರ ಜಾಹೀರಾತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತರಿಸಿದರೆ ಅವುಗಳ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ಸೂಚಿಸಿದೆ.
ಜಾಹೀರಾತುಗಳ ಪ್ರಸಾರದ ಕುರಿತು ಮಾರ್ಗಸೂಚಿಗಳನ್ನು ಈಗಾಗಲೇ ಖಾಸಗಿ ಮಾಧ್ಯಮಗಳಿಗೆ ನೀಡಿತ್ತು ಅವುಗಳ ಆಧಾರದ ಮೇಲೆ ಜಾಹೀರಾತು ಪ್ರಸಾರವಾಗಬೇಕು ಎಂದು ತಿಳಿಸಿದೆ.