ನವದೆಹಲಿ: ಕೃಷಿ ಕಾನೂನಿನ ವಿರುದ್ಧ ವಿರೋಧ ಪಕ್ಷಗಳು ಇಬ್ಬಗೆ ನೀತಿ ಅನುಸುರಿಸುತ್ತಿವೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಆರೋಪಿಸಿದರು.
ಕೆಲವೇ ವ್ಯಕ್ತಿಗಳ ಸ್ವಹಿತದ ಸುಳಿಯಲ್ಲಿ ಕೃಷಿಕರು ಸಿಲುಕಿರುವರು. ಕೃಷಿ ಕಾನೂನಿನಲ್ಲಿ ಕೃಷಿಕರಿಗೆ ಲಾಭವಾಗುವಂತಹ ಹಲವಾರು ವಿಚಾರಗಳು ಇವೆ. ಇದರ ಬಗ್ಗೆ ಸರ್ಕಾರವು ಕೃಷಿಕರಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದರು.
ಯುಪಿಎ ಸರ್ಕಾರ ಇರುವಾಗ ಕೂಡ ಇದೇ ಕಾನೂನನ್ನು ತಯಾರಿಸಲಾಗಿತ್ತು. ಆದರೆ ಈಗ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ. ಚುನಾವಣೆಯಲ್ಲಿ ಸೋತಿರುವ ಕಾರಣದಿಂದಾಗಿ ಅವರು ಕಾನೂನಿನ ವಿರುದ್ಧ ಹೋರಾಡದಲ್ಲಿ ತೊಡಗಿರುವರು ಎಂದು ಪ್ರಸಾದ್ ಆರೋಪಿಸಿದರು.
2019ರಲ್ಲಿ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮತ್ತು ಕೃಷಿ ಉತ್ಪನ್ನಗಳನ್ನು ಯಾವುದೇ ಕಟ್ಟುಪಾಡು ಇಲ್ಲದೆ ಮಾರಾಟ ಮಾಡುವಂತೆ ಆಗಲು ಕಾನೂನು ರೂಪಿಸುವುದಾಗಿ ಹೇಳಿತ್ತು ಎಂದು ರವಿಶಂಕರ್ ಪ್ರಸಾದ್ ಅವರು ಹೇಳಿದರು.