ನವದೆಹಲಿ: ಕೇಂದ್ರ ಸರ್ಕಾರದ ನೂತನ ೩ ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಇಂದು ದೇಶದಾದ್ಯಂತ ರೈತ ಸಂಘಟನೆಗಳು ಬಂದ್ಗೆ ಕರೆ ನೀಡಿದೆ.
ಇದರಿಂದ ಸಾರಿಗೆ ಸೇವೆ, ಕಚೇರಿಗಳು, ಅಂಗಡಿ ಮುಂಗಟ್ಟು ತೆರೆಯುವಿಕೆ, ಹಣ್ಣು ತರಕಾರಿ ಮಾರಾಟಗಳ ಮೇಲೆ ಪರಿಣಾಮ ಬೀಳಲಿದೆ
ಆದರೆ ಬ್ಯಾಂಕ್ ವ್ಯವಹಾರಗಳು ಇಂದು ನಡೆಯಲಿದ್ದು, ರೈತರ ಪ್ರತಿಭಟನೆಗೆ ತಮ್ಮ ಬೆಂಬಲವಿದೆ ಬ್ಯಾಂಕ್ ಒಕ್ಕೂಟ ತಿಳಿಸಿದೆ.
ಇಂದು ಶಾಂತಿಯುತ ಪ್ರತಿಭಟನೆಯಾಗಿದ್ದು ತುರ್ತು ಸೇವೆಗಳಾದ ಆಂಬ್ಯುಲೆನ್ಸ್ ಇತ್ಯಾದಿ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಇಂದು ಬೆಳಗ್ಗೆ ೧೧ಗಂಟೆಯಿಂದ ಅಪರಾಹ್ನ ೩ ಗಂಟೆಯವರೆಗೆ ಬಂದ್ ನಡೆಯಲಿದೆ.