ಶ್ರೀನಗರ: ದೇಶದ ಗಡಿ ಭಾಗವಾಗಿರುವ ಜಮ್ಮು ಮತ್ತು ಕಾಶ್ಮೀರದ ಫುಲ್ವಾಮ ಜಿಲ್ಲೆಯಲ್ಲಿ ರಕ್ಷಣಾ ಪಡೆ ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಆ ಸಂದರ್ಭದಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾಪಡೆಯ ಮೂಲಗಳಿಂದ ತಿಳಿದುಬಂದಿದೆ.
ಬುಧವಾರ ಬೆಳಗ್ಗೆ ಪುಲ್ವಾಮ ನಗರದಲ್ಲಿ ಸಿಕ್ಕ ಕೆಲವು ಖಚಿತ ಮಾಹಿತಿಗಳ ಆಧಾರದ ಮೇಲೆ ಭದ್ರತಾಪಡೆ ಸಿಬ್ಬಂದಿಗಳು ಉಗ್ರರು ಅಡಗಿದ್ದ ಜಾಗದ ಮೇಲೆ ದಾಳಿ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಅವರಿಬ್ಬರ ಮಧ್ಯೆ ಗುಂಡಿನ ಕಾದಾಟ ನಡೆದಿದೆ ಎನ್ನಲಾಗುತ್ತಿದೆ.
ಆ ಸ್ಥಳದಲ್ಲಿ ಇನ್ನು ಹೆಚ್ಚಿನ ಉಗ್ರರು ಇರಬಹುದು ಎಂಬ ಅನುಮಾನ ಗಡಿ ರಕ್ಷಕರಲ್ಲಿ ಇದ್ದು, ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಅಲ್ಲದೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಆ ಸ್ಥಳದ ಕಾರ್ಯಾಚರಣೆಯಿಂದ ನಿರೀಕ್ಷಿಸಲಾಗುತ್ತಿದೆ.