ನವದೆಹಲಿ:ಕೋವಿಡ್ 19 ಸೋಂಕಿತ ವ್ಯಕ್ತಿಯ ಮನೆಯ ಹೊರಗೆ ಪೋಸ್ಟರ್ ಅಥವಾ ಸೂಚನಾ ಫಲಕಗಳನ್ನು ಅಂಟಿಸಬಾರದೆಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಅಶೋಕ್ ಭೂಷಣ್, ಜಸ್ಟೀಸ್ ಆರ್. ಸುಭಾಶ್ ರೆಡ್ಡಿ ಹಾಗೂ ಜಸ್ಟೀಸ್ ಎಂ.ಆರ್.ಶಾ ನೇತೃತ್ವದ ತ್ರಿಸದಸ್ಯ ಪೀಠ ಸೂಚನೆಯನ್ನ ನೀಡಿದೆ.
ಡಿಎಂಎ ಅಡಿಯಲ್ಲಿ ಅಧಿಕಾರಿಗಳು ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾಗ ಮಾತ್ರ ರಾಜ್ಯ ಸರ್ಕಾರ ಇಂತಹ ಪೋಸ್ಟರ್ ಗಳನ್ನು ಅಂಟಿಸಬಹುದಾಗಿದೆ ಇಲ್ಲದಿದ್ದರೆ ಯಾವುದೇ ಪೋಸ್ಟರ್ ಆಂಟಿಸಬಾರದೆಂಡು ಎಂದು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು ಸ್ಪಷ್ಟಪಡಿಸಿದೆ.
ಕೋವಿಡ್ 19 ಸೋಂಕಿತರ ಮನೆಯ ಹೊರಗೆ ಪೋಸ್ಟರ್ ಅಂಟಿಸುವುದು ತಾರತಮ್ಮಕ್ಕೆ ಕಾರಣವಾಗಲಿದೆ ಎಂದು ದೂರಿ ಪೋಸ್ಟರ್ ವಿರುದ್ಧ ಮೇಲ್ಮನವಿಯನ್ನ ಸಲ್ಲಿಸಲಾಗಿದ್ದು, ಕಳೆದ ವಾರ ಸುಪ್ರೀಂ ಆದೇಶವನ್ನು ಕಾಯ್ದಿರಿಸಿತ್ತು.
ಕೋವಿಡ್ 19 ರೋಗಿಗಳ ಮನೆಯ ಹೊರಗೆ ಪೋಸ್ಟರ್ ಅಂಟಿಸುವುದನ್ನು ಪ್ರಶ್ನಿಸಿ ವಕೀಲ ಕುಶ್ ಕಾರ್ಲಾ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಕೊರೋನ ರೋಗಿಗಳ ಗುರುತನ್ನು ಬಹಿರಂಗಪಡಿಸುವುದು ವ್ಯಕ್ತಿಯ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ವಾದಿಸಿದ್ದರು. ಅನಾರೋಗ್ಯ ಮತ್ತು ದೈಹಿಕ ತೊಂದರೆಯ ಕಾರಣದಿಂದ ತಾರತಮ್ಮ ಎಸಗುವುದಕ್ಕೆ ಸಂವಿಧಾನದಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಇವರು ವಾದಿಸಿದ್ದರು.