ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇಂದು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಕೊನೆಗೊಳಿಸುವ ಸಲುವಾಗಿ ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ತರಲು ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಭಂದ ನರೇಂದ್ರ ಸಿಂಗ್ ತೋಮರ್ ಅವರು ಕೇಂದ್ರ ಗೃಹ ಸಚಿವರಿಗೆ ತಿದ್ದುಪಡಿಗಳೊಂದಿಗೆ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿಯನ್ನ ಮೂಲಗಳು ತಿಳಿಸಿವೆ. ಅಮಿತ್ ಷಾ ಅವರ ಅವರ ಅನುಮೋದನೆ ಪಡೆದ ನಂತರ ಕೃಷಿ ಸಚಿವರು ಈ ಪ್ರಸ್ತಾಪವನ್ನು ರೈತ ಸಂಘಕ್ಕೆ ಕಳುಹಿಸಲಿದ್ದಾರೆ.
ಕೇಂದ್ರವು ಸಿದ್ಧಪಡಿಸಿದ ಪ್ರಸ್ತಾವನೆಯ 5 ಮುಖ್ಯಾಂಶಗಳು ಎಂದರೆ…
1. ಕೇಂದ್ರ ಸರ್ಕಾರವು ಎಂ ಎಸ್ ಪಿ ಯನ್ನ ಮುಂದುವರೆಸುತ್ತದೆ.
2. ಎಪಿಎಂಸಿ ಕಾನೂನಿನಲ್ಲಿ ದೊಡ್ಡ ಬದಲಾವಣೆ.
3. ಖಾಸಗಿ ವ್ಯಕ್ತಿಗಳು ರೈತರೊಂದಿಗೆ ವ್ಯವಹಾರ ಮಾಡಲು ತಮ್ಮನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.
4. ಗುತ್ತಿಗೆ ಆಧಾರಿತ ಕೃಷಿಯಲ್ಲಿ ರೈತರಿಗೆ ಸಾಮಾನ್ಯ ನ್ಯಾಯಾಲಯವನ್ನು ಸಂಪರ್ಕಿಸುವ ಅವಕಾಶ ಸಿಗಲಿವೆ ಹಾಗೂ ಕೇಂದ್ರವು ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವನ್ನು ರಚಿಸಲಿದೆ.
5.ಖಾಸಗಿ ವ್ಯಕ್ತಿಗಳ ಮೇಲೆ ಕೇಂದ್ರ ತೆರಿಗೆ ವಿಧಿಸಲಿದೆ.
ಹೊಸ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಸರ್ಕಾರದ ಪ್ರಸ್ತಾಪವನ್ನು ರೈತ ಮುಖಂಡರು ತಿರಸ್ಕರಿಸಿದ್ದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ರಾತ್ರಿ ಆಯ್ದ ಕೆಲವು ರೈತ ಸಂಘ ಮುಖಂಡರೊಂದಿಗೆ ಕರೆ ನೀಡಿದ್ದು ಇದು ವಿಫಲವಾಗಿತ್ತು.
13 ದಿನಗಳಿಂದ ಸಾವಿರಾರು ರೈತರು ದೆಹಲಿಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಯನ್ನು ಮಾಡುತ್ತಿದ್ದು ಇದನ್ನು ಕೊನೆಗೊಳಿಸಲು ಮಾತುಕತೆಗಳು ನಡೆಯುತ್ತಿವೆ.