ನಿರ್ಮಾಪಕ ಸೋನು ಸೂದ್ ಜನಸಾಮಾನ್ಯರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅವರು ಮುಂಬೈಯಲ್ಲಿ ಎಂಟು ಆಸ್ತಿಗಳನ್ನು ಅಡವಿಟ್ಟಿದ್ದಾರೆ ಎಂಬ ಸುದ್ದಿ ಈಗ ಹೊರಬಿದ್ದಿದೆ. 2020 ರ ಸಾಮಾಜಿಕ ಏರುಪೇರಿನ ಸಮಯದಲ್ಲಿ ಸೋನು ಅವರ ಮಾನವೀಯ ಕಾರ್ಯಗಳು ಎಲ್ಲರ ಮನ ಮುಟ್ಟಿದ್ದವು ಹಾಗೂ ಅತಿ ಹೆಚ್ಚು ಪ್ರಶಂಸೆಗೆ ಪಾತ್ರವಾಗಿತ್ತು.
ಸಹಾಯಕ್ಕಾಗಿ ಮಾಡಿದ ಸಾಲವನ್ನು ಸಂಗ್ರಹಿಸಲು ನಟ ತಮ್ಮ ಕೆಲವು ಆಸ್ತಿಗಳನ್ನು ಅಡವಿಟ್ಟಿದ್ದಾರೆ ಎಂದು ಹೊಸ ವರದಿ ಹೇಳಿದೆ. ಆಸ್ತಿಗಳಲ್ಲಿ ಎರಡು ಅಂಗಡಿಗಳು ಮತ್ತು ಆರು ಫ್ಲ್ಯಾಟ್ಗಳಿವೆ. ಈ ಕಟ್ಟಡವು ಮುಂಬೈನ ಇಸ್ಕಾನ್ ದೇವಾಲಯದ ಸಮೀಪ ಎಬಿ ನಾಯರ್ ರಸ್ತೆಯಲ್ಲಿದೆ. ಸಾಲವನ್ನು ಸಂಗ್ರಹಿಸಲು 5 ಲಕ್ಷ ರೂ. ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ ಎನ್ನಲಾಗುತ್ತಿದೆ.
ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡಿ ನಟ ಸೋನು ಸೂದು ಸುದ್ದಿಯಾಗಿದ್ದರು.
ಅವರ ಪ್ರಯತ್ನಗಳಿಗಾಗಿ, ಅವರಿಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಪ್ರತಿಷ್ಠಿತ ಎಸ್ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ನೀಡಿದೆ.