ನವದೆಹಲಿ: ಪಿಎಂ-ವಾಣಿ ಎಂಬ ಹೆಸರಿನಲ್ಲಿ ದೇಶಾದ್ಯಂತ ಸಾರ್ವಜನಿಕ ವೈಫೈ ನೆಟ್ ವರ್ಕ್ ಸ್ಥಾಪಿಸಲು ಕೇಂದ್ರ ಮುಂದಾಗಿದೆ. ಕೇಂದ್ರ ಸಚಿವ ಸಂಪುಟ ಡಿಸೆಂಬರ್ 9ರಂದು ಈ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಗಿದೆ ಎಂಬ ಸುದ್ದಿ ತಿಳಿದು ಬಂದಿದೆ.
ಸಾರ್ವಜನಿಕ ವೈಫೈಸೇವೆಯನ್ನು ಇನ್ನಷ್ಟು ಬಲಗೊಳಿಸುವ ಮೂಲ ಉದ್ದೇಶವನ್ನು ಯೋಜನೆ ಹೊಂದಿದ್ದು, ಪಬ್ಲಿಕ್ ಟಾಟಾ ಆಫೀಸ್ ಅಗ್ರಿಗೇಟರ್ಸ್ ಇದನ್ನು ನಿರ್ವಹಿಸಲಿದ್ದಾರೆ. ದೇಶದ ಎಲ್ಲೆಡೆ ಈಗಾಗಲೇ ಸ್ಥಾಪಿಸಲಾಗಿರುವ ಪಬ್ಲಿಕ್ ಡಾಟಾ ಆಫೀಸ್ ಮುಖೇನ ಈ ವೈಫೈ ಯೋಜನೆಯನ್ನು ಎಲ್ಲರಿಗೂ ತಲುಪಿಸಲಾಗುವುದು. ಈಗ ಜಾರಿಗೊಳಿಸಿರುವ ಯೋಜನೆ ವೈಫೈ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ತರುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.