ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ 1948 ರಲ್ಲಿ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯನ್ನು (ಯುಡಿಹೆಚ್ಆರ್) ಅಂಗೀಕರಿಸಿದ ದಿನಾಂಕವನ್ನು ಸೂಚಿಸುತ್ತದೆ ಹಾಗೂ ಮಾನವ ಹಕ್ಕುಗಳ ದಿನವನ್ನು ಪ್ರತಿ ವರ್ಷ ಡಿಸೆಂಬರ್ 10 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಜನಾಂಗ, ಬಣ್ಣವನ್ನು ಲೆಕ್ಕಿಸದೆ ಪ್ರತಿಯೊಬ್ಬರಿಗೂ ಮನುಷ್ಯನಾಗಿ ಸಿಗಲೇ ಬೇಕಾದ ಹಕ್ಕುಗಳನ್ನು ಘೋಷಿಸುತ್ತದೆ. ಧರ್ಮ, ಲಿಂಗ, ಭಾಷೆ, ರಾಜಕೀಯ ಅಥವಾ ಇತರ ಅಭಿಪ್ರಾಯ, ರಾಷ್ಟ್ರೀಯ ಅಥವಾ ಸಾಮಾಜಿಕ ಮೂಲ, ಆಸ್ತಿ, ಜನನ ಅಥವಾ ಇತರ ಸ್ಥಾನಮಾನ ಎಲ್ಲವೂ ಈ ಹಕ್ಕಿನಲ್ಲಿ ಒಳಗೊಂಡಿದೆ.
ವಿಶ್ವಾದ್ಯಂತ ಮಾನವನಿಗೆ ತನ್ನ ಹಕ್ಕನ್ನು ನೀಡಿದ ಈ ವಿಧಿಯನ್ನು ನೆನಪಿಸಿಕೊಳ್ಳಲು ಹಾಗೂ ಅದರ ಬಗ್ಗೆ ಇನ್ನೂ ಹೆಚ್ಚಿನ ಅರಿವನ್ನು ಮೂಡಿಸಲು ಮಾನವ ಹಕ್ಕುಗಳ ದಿನವನ್ನು ವಿಶ್ವಾದ್ಯಂತ ಡಿಸೆಂಬರ್ 10ರಂದು ಆಚರಿಸುವ ಆಲೋಚನೆ ಮಾಡಲಾಯಿತು. ಡಿಸೆಂಬರ್ 4, 1950 ರಂದು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಯಿತು.
2020ರ ಮಾನವ ಹಕ್ಕುಗಳ ದಿನ ಉದ್ದೇಶ, ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಪ್ರಪಂಚವೇ ತುತ್ತಾಗಿದ್ದೆ ಮತ್ತು ಚೇತರಿಕೆಯ ಪ್ರಯತ್ನಗಳಿಗೆ ಮಾನವ ಹಕ್ಕುಗಳೇ ಕೇಂದ್ರವೆಂದು ಖಚಿತಪಡಿಸಿಕೊಳ್ಳುವ ಮೂಲಕ ಉತ್ತಮವಾಗಿ ಸಮಾಜವನ್ನು ಮರಳಿ ನಿರ್ಮಿಸುವ ಅಗತ್ಯವನ್ನು ಕೇಂದ್ರೀಕರಿಸುತ್ತದೆ.
ಕೋವಿಡ್-19 ರ ನಂತರದ ಪ್ರಪಂಚದ ಕೇಂದ್ರದಲ್ಲಿ ಮಾನವ ಹಕ್ಕುಗಳು ಇರಬೇಕು ಎಂದು ವಿಶ್ವಸಂಸ್ಥೆಯು ಎತ್ತಿ ತೋರಿಸುತ್ತದೆ. “ಕೋವಿಡ್-19 ಬಿಕ್ಕಟ್ಟು ಆಳವಾದ ಬಡತನ, ಹೆಚ್ಚುತ್ತಿರುವ ಅಸಮಾನತೆಗಳು, ರಚನಾತ್ಮಕ, ಭದ್ರವಾದ ತಾರತಮ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಯಲ್ಲಿನ ಇತರ ಅಂತರಗಳಿಂದ ಉತ್ತೇಜಿಸಲ್ಪಟ್ಟಿದೆ. ಈ ಅಂತರಗಳನ್ನು ಮುಚ್ಚಲು ಮತ್ತು ಮಾನವ ಹಕ್ಕುಗಳನ್ನು ಮುನ್ನಡೆಸಿದಾಗ ಮಾತ್ರ ನಾವು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತೇವೆ ಮತ್ತು ಜಗತ್ತನ್ನು ಮರಳಿ ನಿರ್ಮಿಸುತ್ತೇವೆ “ಎಂದು ಯುಎನ್ನ ವೆಬ್ಸೈಟ್ ಹೇಳುತ್ತದೆ.