ನವದೆಹಲಿ: ದೇಶದಲ್ಲಿ ಕೊರೋನ ನಿಯಮಗಳು ಸಡಿಲ ಆದಷ್ಟು ಕೊರೋನ ಸೋಂಕಿತರ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಕಳೆದ 24 ಗಂಟೆಗಳಲ್ಲಿ 31,521 ಪಾಸಿಟಿವ್ ಬಂದಿರುವುದು ದೃಢವಾಗಿದ್ದು, ಒಟ್ಟು 97,67,371 ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ಆದರೆ ಸಂತಸದ ವಿಷಯವೆಂದರೆ ರೋಗದಿಂದ ಚೇತರಿಸಿಕೊಂಡು ಹಿಂತಿರುಗಿರುವವರ ಸಂಖ್ಯೆಯು ಹೆಚ್ಚಾಗಿದೆ. ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 92.53 ಲಕ್ಷ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.
ದೇಶದಲ್ಲಿ ಕೋವಿಡ್-19 ಸೋಂಕಿತರ ಚೇತರಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪ್ರಸ್ತುತ ಶೇಕಡ 94.74 ರಷ್ಟು ತಲುಪಿದೆ ಎಂದು ವರದಿಗಳು ತಿಳಿಸುತ್ತವೆ. ಅದರೊಂದಿಗೆ ಸಾವನ್ನಪ್ಪುವ ಸಂಖ್ಯೆಯು ಇಳಿಕೆಯಾಗಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಇದುವರೆಗೂ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 141772 ಆಗಿದ್ದು 24ಗಂಟೆಯಲ್ಲಿ 412 ಜನ ಕರುನಾ ಕ್ಕೆ ಬಲಿಯಾಗಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ನಾಲ್ಕು ಲಕ್ಷಕ್ಕಿಂತ ಕಡಿಮೆ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದು, ಒಟ್ಟು ಪ್ರಕರಣದ ಶೇಕಡ 3.81 ಎಂದು ತಿಳಿದುಬಂದಿದೆ.