News Kannada
Monday, December 05 2022

ದೇಶ-ವಿದೇಶ

ಜನವರಿಯಿಂದ ಫೆಬ್ರವರಿ ಒಳಗೆ ಜೆಇಇ ಪರೀಕ್ಷೆ ನಡೆಸುವ ಸಾಧ್ಯತೆ ಇದೆ: ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್

Photo Credit :

ಜನವರಿಯಿಂದ ಫೆಬ್ರವರಿ ಒಳಗೆ ಜೆಇಇ ಪರೀಕ್ಷೆ ನಡೆಸುವ ಸಾಧ್ಯತೆ ಇದೆ: ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ಇನ್ನು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಹಾಗೂ ಆಗಿನ ಸಂದರ್ಭಕ್ಕೆ ಅನುಗುಣವಾಗಿ ಪರೀಕ್ಷೆಗಳ ಬಗ್ಗೆ ನಿರ್ದಿಷ್ಟ ನಿರ್ಧಾರಗಳನ್ನು ಮಾಡಲಾಗುವುದು ಎಂದ ರಾಷ್ಟ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್.

ಡಿಸೆಂಬರ್ 10ರಂದು ವಿದ್ಯಾರ್ಥಿಗಳೊಂದಿಗಿನ ನೇರ ಸಂವಾದದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಡಾ. ಪೋಖ್ರಿಯಾಲ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಖ್ಯೆ ಸುತ್ತುಗಳನ್ನು ಹೆಚ್ಚಿಸಬಹುದೇ ಎಂದು ಬಹಳಷ್ಟು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಅಗತ್ಯವಿದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಜೆಇಇ ಮೇನ್‌ಗೆ ಎರಡು, ಮೂರು ಅಥವಾ ನಾಲ್ಕರವರೆಗೂ ಸುತ್ತುಗಳ ಸಂಖ್ಯೆಯನ್ನು ಹೆಚ್ಚಿಸಲು ಸಚಿವಾಲಯ ಸಕ್ರಿಯವಾಗಿ ಪರಿಗಣಿಸುವ ಸಾಧ್ಯವಿದೆ. ಸಾಧ್ಯವಾದರೆ, ನಾವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ.”ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟಂತೆ ಈಗಾಗಲೇ ಶಿಕ್ಷಣ ಮಂಡಳಿ ಶೇಕಡ 30ರಷ್ಟು ಪಠ್ಯವನ್ನು ಕಡಿತಗೊಳಿಸಿದೆ. ಆದರೂಪರೀಕ್ಷೆಯನ್ನು ವಿಳಂಬ ಗೊಳಿಸುವಂತೆ ಕೋರಿಕೆಗಳು ಕೇಳಿಬರುತ್ತಿರುವುದರಿಂದ ಅದರ ಬಗ್ಗೆ ಶಿಕ್ಷಣ ಮಂಡಳಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಜೆಇಇ ಮುಖ್ಯ 2021 ರ ಮೊದಲ ಹಂತವು ಜನವರಿಯಿಂದ ಫೆಬ್ರವರಿ ವರೆಗೆ ಮುಂದೂಡಲ್ಪಟ್ಟಿದೆ ಎಂದು ಹೇಳಲಾಗಿದೆ.

See also  ದೆಹಲಿಯಲ್ಲಿ ಲಘು ಭೂಕಂಪನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು