ನವದೆಹಲಿ: ರೈತರ ಹೋರಾಟಕ್ಕೆ ಉಚಿತವಾದ ಸ್ಪಂದನೆಯನ್ನು ನೀಡಿ. ಅವರ ತಾಳ್ಮೆಯನ್ನು ಎಂದು ಪರೀಕ್ಷಿಸಲು ಹೋಗದಿರಿ. ಅವರು ನಮ್ಮ ಅನ್ನದಾತರು ಎಂಬುದು ನೆನಪಿರಲಿ ಎಂದು ಎನ್ ಸಿಟಿ ಮುಖಂಡ ಶರದ್ ಪವಾರ್.
ಕೃಷಿ ಕಾಯ್ದೆಯ ವಿರುದ್ಧ ರೈತ ಹೋರಾಟದ ಬಗ್ಗೆ ಮಾತನಾಡಿದ ಅವರು, ಪ್ರತಿಯೊಬ್ಬರ ತಾಳ್ಮೆಗೂ ಒಂದು ಮಿತಿ ಇರುತ್ತದೆ. ಅದನ್ನು ಪರೀಕ್ಷೆ ಮಾಡಲು ಹೋಗದಿರಿ. ರೈತರ ಬೇಡಿಕೆಯನ್ನು ಪರಿಗಣಿಸಿ ಅದಕ್ಕೆ ಸೂಕ್ತ ಪರಿಹಾರಗಳನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಿ. ಇಲ್ಲದಿದ್ದಲ್ಲಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ದೇಶಾದ್ಯಂತ ಹರಡಲು ಹೆಚ್ಚು ಸಮಯ ಬೇಡ ಎಂದು ಎಚ್ಚರಿಸಿದರು.
ಕೃಷಿ ಮಸೂದೆಯ ಬಗ್ಗೆ ಯಾವುದೇ ದೀರ್ಘವಾದ ಚರ್ಚೆ ನಡೆಯದೆ ಅಥವಾ ವಿರೋಧಪಕ್ಷಗಳ ಮಾತಿಗೆ ಕಿವಿಕೊಡದೆ ಅವಸರದಲ್ಲಿ ತೆಗೆದುಕೊಂಡಿದಾಗಿದೆ. ಇದು ತಪ್ಪು ಎಂದು ಕೇಂದ್ರದ ನಿರ್ಧಾರವನ್ನು ವಿರೋಧಿಸಿದರು. ಅದರೊಂದಿಗೆ ರೈತರ ಆಗ್ರಹಕ್ಕೆ ಬೆಂಬಲಿಸುವಂತೆ ‘ದೆಹಲಿ ಚಲೋ’ ಪ್ರತಿಭಟನೆಯನ್ನು ಇಂದು ನಡೆಸಿದರು.