ನಾಗ್ಪುರ್: 22 ವರ್ಷದ ಯುವಕನೊಬ್ಬ ತನ್ನ ಗೆಳತಿಯ 10 ವರ್ಷದ ಸಹೋದರ ಮತ್ತು 70 ವರ್ಷದ ಅಜ್ಜಿಯನ್ನು ಕೊಂದು, ತಾನು ಆತ್ಮಹತ್ಯೆಗೆ ಶರಣಾದ ಘಟನೆ ನಾಗ್ಪುರದಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳ ತನಿಖೆಯ ಪ್ರಕಾರ ಇನ್ಸ್ಟಾಗ್ರಾಂ ಮೂಲಕ ಪ್ರಾರಂಭವಾದ ಪರಿಚಯ ಹಾಗೂ ಪ್ರೇಮ ಈ ಘಟನೆಗೆ ಕಾರಣವಾಗಿದೆ.
ಮೊಮಿನ್ಪುರಾ ನಿವಾಸಿ ಮೊಯಿನ್ ಖಾನ್ ಹಾಗೂ ಗುಂಜನ್ ಅವರ ಸಂಬಂಧವನ್ನು ಒಪ್ಪದೇ ಮನೆಯವರು ಆಕೆಯಿಂದ ಮೊಬೈಲ್ ನನ್ನು ಹಿಂಪಡೆದು ಅವನಿಂದ ದೂರವಿರುವಂತೆ ಹೇಳಿದರು ಎನ್ನಲಾಗುತ್ತಿದ್ದು, ಇದರಿಂದ ಕೋಪಗೊಂಡ ಯುವಕ, ಗುರುವಾರ ಮಧ್ಯಾಹ್ನ ಆಕೆಯ ಅಜ್ಜಿ ಹಾಗೂ ತಮ್ಮನನ್ನು ಕೊಂದಿದ್ದಾನೆ. ಅನಂತರ ಮೊಯಿನ್ ಖಾನ್ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅದೇ ರಾತ್ರಿಯ ಮಂಕಾಪುರ ಪ್ರದೇಶದ ರೈಲ್ವೆ ಹಳಿಗಳಲ್ಲಿ ಖಾನ್ ಅವರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.