ಕೊಚ್ಚಿ: ವಿಕೃತ ಮನಸುಗಳು ವಿಚಿತ್ರ ನಡವಳಿಕೆಗಳು ಇಂದು ಹಲವೆಡೆ ಕೇಳಿಬರುತ್ತಲೇ ಇದೆ. ಅಂತಹದೇ ಮತ್ತೊಂದು ವಿಕೃತ ಮನುಷ್ಯ ಮನೆಯಲ್ಲಿದ್ದ ನಾಯಿ ಮರಿಯನ್ನು ದೂರ ಬಿಟ್ಟು ಬರಲು ಕಾರಿಗೆ ಕಟ್ಟಿ ಎಳೆದೊಯ್ದು ಘಟನೆ ಕೇರಳದ ಎರ್ನಾಕುಲಂನ ಸಮೀಪದ ಪರವೂರ್ ಎಂಬಲ್ಲಿ ನಡೆದಿದೆ.
ಆತ ನಾಯಿ ಮರಿಯನ್ನು ಎಳೆದೊಯ್ಯುತ್ತಿವೆ ದೃಶ್ಯ ಈಗ ವೈರಲ್ ಆಗಿದ್ದು ಎಲ್ಲರ ನಿಂದನೆಗೆ ಗುರಿಯಾಗಿದೆ. ಆರೋಪಿಯನ್ನು ಯೂಸುಫ್ ಎಂದು ಗುರುತಿಸಿದ್ದು, ತನ್ನ ಕಾರಿಗೆ ನಾಯಿಮರಿಯನ್ನು ಕಟ್ಟಿಹಾಕಿ ರಸ್ತೆಯಲ್ಲಿ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ ಯೂಸುಫ್ ನಾ ಡ್ರೈವಿಂಗ್ ಲೈಸೆನ್ಸ್ ನನ್ನು ರದ್ದು ಮಾಡಲು ನಿರ್ಧರಿಸಿದೆ