News Kannada
Thursday, December 08 2022

ದೇಶ-ವಿದೇಶ

ರೈತರ ಅನುಕೂಲಕ್ಕಾಗಿ ರೂಪಿಸಿರುವುದು ಈ ಕಾನೂನು: ಪ್ರಧಾನಿ ನರೇಂದ್ರ ಮೋದಿ

Photo Credit :

ರೈತರ ಅನುಕೂಲಕ್ಕಾಗಿ ರೂಪಿಸಿರುವುದು ಈ ಕಾನೂನು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಾರತದಲ್ಲಿ ಹೊಸ ಕೃಷಿ ಕಾಯ್ದೆಯ ವಿರುದ್ಧ ಮೂಡಿಬರುತ್ತಿರುವ ಆಕ್ರೋಶವನ್ನು ತಣಿಸುವಂತೆ ಹಾಗೂ ಜನರಲ್ಲಿನ ಗೊಂದಲಗಳಿಗೆ ಉತ್ತರಿಸುವಂತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕಾನೂನು ರೈತ ವಿರೋಧಿ ಅಲ್ಲ. ಬದಲಾಗಿ ಬದಲಾಗಿ ಅದು ರೈತರಿಗಾಗಿಯೇ ಮಾಡಿದ ಕಾನೂನು ಎಂದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ‘ಹೊಸ ಸುಧಾರಣೆಗಳನ್ನು ತರುತ್ತಿರುವುದು ರೈತರಿಗೆ ಹೊಸ ಮಾರುಕಟ್ಟೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ. ರೈತರಿಗೆ ತಂತ್ರಜ್ಞಾನ ಲಭ್ಯವಾಗುವಂತೆ ಮಾಡುವಲ್ಲಿ ಹಾಗೂ ರೈತರಿಗೆ ನೆರವಾಗುವಂತಹ ಹೂಡಿಕೆಗಳನ್ನು ಕೃಷಿ ಕ್ಷೇತ್ರದತ್ತ ಸೆಳೆಯುವ ಉದ್ದೇಶದಿಂದ” ಎಂದು ಸ್ಪಷ್ಟಪಡಿಸಿದರು.

ಈ ಕಾನೂನು ಕೃಷಿ ಮತ್ತು ಇತರೆ ಕ್ಷೇತ್ರಗಳ ನಡುವೆ ಇದ್ದ ಗೋಡೆಯನ್ನು ಉರುಳಿಸಿ, ಕೃಷಿ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಸಂಗ್ರಹಾಗಾರ ಅಥವಾ ಶೀಥಲೀಕರಣಗಳಿಗೆ ಸಹಾಯವಾಗುತ್ತದೆ. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಗೂ ಇದು ಪೂರಕವಾಗಿದೆ ಎಂದು ಮೋದಿ ಹೇಳಿದರು.

See also  ‘ಜೈಶ್ರೀರಾಮ್’ ಹೇಳುವಂತೆ ದಲಿತ ಯುವಕನಿಗೆ ಥಳಿಸಿದ ಹಿಂದೂ ಕಾರ್ಯಕರ್ತರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು