ತಮಿಳುನಾಡು: ಸಿಬಿಐ ವಶದಲ್ಲಿದ್ದ 45 ಕೋಟಿ ರೂಪಾಯಿ ಮೌಲ್ಯದ 103 ಕಳುವಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಕುರಿತಾದ ತನಿಖೆ ಪ್ರಾರಂಭಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಸಿಬಿ-ಸಿಐಡಿ ಇಲಾಖೆಗೆ ಆದೇಶ ನೀಡಿದೆ.
ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ ವಶಪಡಿಸಿಕೊಂಡಿದ್ದ ಚಿನ್ನ ಇದಾಗಿದ್ದು, 2012ರಿಂದ ಇದು ಸಿಬಿಐ ಸುಪರ್ದಿಯಲ್ಲೇ ಇತ್ತು ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಮಹದೇವನ್ ತಮಿಳುನಾಡಿನ ಅಪರಾಧ ಇಲಾಖೆ- ಅಪರಾಧ ತನಿಖಾ ಇಲಾಖೆಗೆ ತಕ್ಷಣವೇ ಕಳ್ಳರನ್ನು ಶೋಧಿಸುವಂತೆ ಆದೇಶವನ್ನು ನೀಡಿದ್ದಾರೆ. ಪೊಲೀಸರು ಚಿನ್ನ ಕದ್ದ ಕಳ್ಳರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ ಎಂದು ವರದಿಗಳು ಹೇಳುತ್ತೇವೆ.