ಜಮ್ಮು ಕಾಶ್ಮೀರ: ಎಲ್ಒಸಿ ಬಳಿಯ ಒಂದು ಆಳದ ಕಣಿವೆಯಿಂದ ಬಿದ್ದು ಭಾರತೀಯ ಓರ್ವ ಸೈನಿಕ ಮೃತಪಟ್ಟಿದ್ದಾರೆ. ಲ್ಯಾನ್ಸ್ ನಾಯಕ್ ಸುರೇಶ್ ಗುರ್ಗೆ ನೌಶೇರ ಸೆಕ್ಟರ್ ನಾ ಕಲಾಲ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ತಂಡದ ಭಾಗವಾಗಿದ್ದ ಸೈನಿಕರಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ.
ಕಾಶ್ಮೀರದ ರಾಜಾರಿ ಜಿಲ್ಲೆಯ ನಿಯಂತ್ರಣ ರೇಖೆಯ ಬಳಿ ಆಕಸ್ಮಿಕವಾಗಿ ಆಳದ ಒಂದು ಕಣಿವೆಗೆ ಭಾರತೀಯ ಸೈನಿಕರೊಬ್ಬರು ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.