ಅಫ್ಘಾನಿಸ್ತಾನ: ಅಘಾನಿಸ್ತಾನದ ಭದ್ರತಾ ಪಡೆಯಿಂದ 90 ಉಗ್ರರು ಹತರಾಗಿದ್ದಾರೆ ಎಂದು ಅಫ್ಘಾನಿಸ್ಥಾನ ರಕ್ಷಣಾ ಸಚಿವಾಲಯ ತಿಳಿಸಿದ.
ಅಫ್ಘಾನಿಸ್ತಾನ ದಕ್ಷಿಣ ಕಂದಹಾರ್ ಪ್ರಾಂತ್ಯದ ಜೆರಿಯಾ, ಜಾರಿ, ಪಂಜವಾಯಿ, ಮೈವಾಂಡ್ ಹಾಗೂ ಅರ್ಘಂಡಾಬ್ ಜಿಲ್ಲೆಗಳಲ್ಲಿ ತಾಲಿಬಾನ್ ಸಂಘಟನೆ ಹಾಗೂ ರಾಷ್ಟ್ರ ಭದ್ರತಾಪಡೆಗಳ ನಡುವೆ ನಡೆದ ಕಾದಾಟದಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ಒಟ್ಟು 90 ಮಂದಿ ಸಾವನ್ನಪ್ಪಿದ್ದರು ಎಂದು ಹೇಳಿದರು.
ಈ ದಾಳಿಯಿಂದ 90 ಮಂದಿ ಸಾವನ್ನಪ್ಪಿದ್ದಲ್ಲದೆ, ಹತ್ತಕ್ಕೂ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ 30 ಸ್ಪೋಟಕಗಳನ್ನು ಉಗ್ರರು ಅಡಗಿಸಿಟ್ಟಿದ್ದ ಸ್ಥಳಗಳಿಂದ ಹುಡುಕಿ ತೆಗೆದು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.