ಭಾರತೀಯ ಪಂಚಾಂಗದ ಪ್ರಕಾರ ನಾಳೆ ಸಂಭವಿಸಲಿರುವ ಸೂರ್ಯಗ್ರಹಣವು ಈ ವರ್ಷದ ಕೊನೆಯ ಗ್ರಹಣವಾಗಿದ್ದು, ಇದು ಡಿಸೆಂಬರ್ 14 ರ ಸಂಜೆ 7 ಗಂಟೆ 3 ನಿಮಿಷಕ್ಕೆ ಆರಂಭಗೊಂಡು, ಡಿಸೆಂಬರ್ 15 ರಾತ್ರಿ 12.23 ಕ್ಕೆ ಮುಕ್ತಾಯವಾಗಲಿದೆ ಎಂದು ಸೂಚಿಸಲಾಗಿದೆ.
ಪ್ರಪಂಚಕ್ಕೆ ಬೆಳಕು ಚೆಲ್ಲುವ ಸೂರ್ಯನಿಗೂ ಕತ್ತಲು ಕವಿಯುತ್ತದೆ ಎಂಬುವುದಕ್ಕೆ ಉದಾಹರಣೆಯಂತೆ ಗ್ರಹಣಗಳು ಪ್ರತಿವರ್ಷವೂ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಹಲವಾರು ವಾದ-ವಿವಾದ, ಊಹಾಪೋಹಗಳಿಗೆ ಎಡೆಮಾಡಿಕೊಡುತ್ತದೆ. ಆದರೆ ಅದರ ಸತ್ಯ ಹಾಗೂ ಸಾರವನ್ನು ಅರಿಯುವುದು ಅತಿ ಅಗತ್ಯವಾಗಿದೆ.
ಭಾರತೀಯ ಪರಂಪರೆಯ ಹಾಗೂ ನಂಬಿಕೆಗಳ ಪ್ರಕಾರ ಗ್ರಹಣದ ಸಮಯದಲ್ಲಿ ಉಪವಾಸವಿರಬೇಕು ಮತ್ತು ಗ್ರಹಣ ಹಿಡಿದ ಸೂರ್ಯ ಅಥವಾ ಚಂದ್ರನನ್ನು ನೇರವಾಗಿ ನೋಡಬಾರದು ಎಂಬ ವಾಡಿಕೆಯಿದೆ. ಅದನ್ನು ಇಂದು ಹೆಚ್ಚಿನ ಜನ ಮೂಢನಂಬಿಕೆ ಅಥವಾ ಅನಗತ್ಯ ಆಚರಣೆಯೆಂದು ಟೀಕಿಸುತ್ತಾರೆ. ಆದರೆ ಅದರ ಹಿಂದದ ಪೂರ್ವಜರ ಆಲೋಚನೆಗಳನ್ನು ಹಾಗೂ ವೈಜ್ಞಾನಿಕವಾದ ಅಂಶಗಳನ್ನು ಗಮನಿಸಿಹೋಗುತ್ತಾರೆ. ಗ್ರಹಣದ ಸಮಯದಲ್ಲಿ ಕೆಲವೊಂದು ನಕಾರಾತ್ಮಕ ಕಿರಣಗಳು ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಾಗಿದೆ ಎಂಬುದು ವೈಜ್ಞಾನಿಕವಾಗಿಯೂ ಒಪ್ಪುವಂತಹ ವಿಷಯ. ಈ ಕಾರಣದಿಂದಲೇ ಆ ಸಮಯದಲ್ಲಿ ಸೂರ್ಯ ಅಥವಾ ಚಂದ್ರನನ್ನು ನೇರವಾಗಿ ನೋಡಿದರೆ ಅದರಿಂದ ಆರೋಗ್ಯದ ಮೇಲೆ ಹಾಗೂ ಕಣ್ಣಿನ ಮೇಲೆ ಹಲವಾರು ರೀತಿಯ ದುಷ್ಪರಿಣಾಮಗಳು ಉಂಟಾಗ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರೊಂದಿಗೆ ಸೇವಿಸುವ ಆಹಾರದಮೇಲು ಕಿರಣಗಳು ಪರಿಣಾಮಗಳನ್ನು ಬೀರುವ ಸಾಧ್ಯತೆ ಹೆಚ್ಚು. ಇಂತಹ ಅಂಶಗಳನ್ನು ಗಮನದಲ್ಲಿರಿಸಿ ಗ್ರಹಣದ ಸಮಯದಲ್ಲಿ ಆಚರಿಸಬೇಕಾದ ವಿಧಿ ವಿಧಾನಗಳು ರೂಪುರೇಷೆಯನ್ನು ನಮ್ಮ ಪೂರ್ವಜರು ನಿಯೋಜಿಸಿದ್ದರು.
ಈ ಬಾರಿಯ ಗ್ರಹಣದ ವಿಷಯವನ್ನು ಹೇಳುವುದಾದರೆ ಇಂದು ಹಿಡಿಯಲಿರುವ ಚಂದ್ರಗ್ರಹಣ ಈ ವರ್ಷದ ನಾಲ್ಕನೇ ಹಾಗೂ ಕೊನೆಯ ಗ್ರಹಣವಾಗಿದೆ. ಈ ಸಂಪೂರ್ಣ ಗ್ರಹಣವು ಹಗಲಿನ ಸಮಯದಲ್ಲಿ ಸಂಭವಿಸುವುದಿಲ್ಲವಾದ್ದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ.
ಈ ಸಂಪೂರ್ಣ ಸೂರ್ಯಗ್ರಹಣ ದಕ್ಷಿಣ ಅಮೆರಿಕದ ದಕ್ಷಿಣ ತುದಿಯನ್ನು ಹಾದು ಹೋಗುತ್ತದೆ ಮತ್ತು ಹವಾಮಾನವು ಸ್ಪಷ್ಟವಾಗಿದ್ದರೆ ಚಿಲಿ ಮತ್ತು ಅರ್ಜೆಂಟೈನಾದ ಕೆಲವು ಪ್ರದೇಶಗಳಲ್ಲಿ ಗೋಚರಿಸುವ ಸಾಧ್ಯತೆ ಇದೆ. ದಕ್ಷಿಣ ಅಮೇರಿಕಾ, ದಕ್ಷಿಣ-ಪಶ್ಚಿಮ ಆಫ್ರಿಕಾ ಮತ್ತು ಅಂಟಾರ್ಕ್ಟಿಕಾದ ಕೆಲವು ಸ್ಥಳಗಳು ಸಂಪೂರ್ಣ ಸೂರ್ಯಗ್ರಹಣದ ಭಾಗಶಃ ಹಂತವನ್ನು ನೋಡಲು ಸಾಧ್ಯವಾಗುತ್ತದೆ.